ಮನೆಯಲ್ಲಿರೊ ʼಅಕ್ವೇರಿಯಂʼ ನಿರ್ವಹಣೆ ಹೀಗಿರಲಿ

ಬಹುತೇಕ ಜನರಿಗೆ ಮನೆಯಲ್ಲಿ ಅಕ್ವೇರಿಯಂನೊಳಗೆ ಮೀನುಗಳನ್ನು ಸಾಕಲು ಇಷ್ಟ. ಆದರೆ ಅವರಿಗೆ ಮೀನಿಗೆ ಎಷ್ಟು ಬಾರಿ ಆಹಾರ ನೀಡಬೇಕೆಂದು ಗೊತ್ತಿರುವುದಿಲ್ಲ.

ಕೆಲವರು ತಾವು ತಿನ್ನುವಷ್ಟು ಬಾರಿ ಮೀನಿಗೂ ತಿನ್ನಿಸುತ್ತಾರೆ. ಇದು ತಪ್ಪು. ಇದರಿಂದ ಮೀನುಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಮೀನುಗಳನ್ನು ಬೆಳೆಸುವ ಮುನ್ನ ಈ ವಿಷಯಗಳು ನೆನಪಿನಲ್ಲಿರಲಿ.

* ಮೀನುಗಳನ್ನು ಸಾಕುವ ಮುನ್ನ ಅವುಗಳ ಆಹಾರ ಶೈಲಿಯನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ವಿಭಿನ್ನ ಜಾತಿಯ ಮೀನುಗಳು ಬೇರೆ ಬೇರೆ ಆಹಾರ ಶೈಲಿಯನ್ನು ಹೊಂದಿರುತ್ತವೆ.

* ಕೆಲವೊಂದು ಜಾತಿಯ ಮೀನುಗಳಿಗೆ ದಿನಕ್ಕೆ ಎರಡು ಬಾರಿ ಆಹಾರ ಹಾಕಿದರೆ ಸಾಕು.

* ಚಿಕ್ಕ ಮೀನುಗಳಿಗೆ ಅಂದರೆ ಮರಿ ಮೀನುಗಳಿಗೆ ಸ್ವಲ್ಪ ಹೆಚ್ಚು ಬಾರಿ ಆಹಾರ ಹಾಕಬೇಕಾಗುತ್ತದೆ. ಮೀನು ಸ್ವಲ್ಪ ದೊಡ್ಡದಾದ ಮೇಲೆ ತುಂಬಾ ಸಲ ಆಹಾರ ಹಾಕಬೇಕಾಗಿಲ್ಲ. ಮರಿ ಮೀನುಗಳು ಹೆಚ್ಚು ಆಹಾರ ಸೇವಿಸುತ್ತವೆ.

* ಕೆಲವು ಮೀನುಗಳು ಬೌಲ್‌ನ ತಳ ಭಾಗದಲ್ಲಿ ನಿಲ್ಲುವ ಆಹಾರ ಇಷ್ಟಪಟ್ಟರೆ ಇನ್ನು ಕೆಲವು ನೀರಿನಲ್ಲಿ ತೇಲುವ ಅಹಾರಗಳನ್ನು ಇಷ್ಟಪಡುತ್ತವೆ. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರ ಉಣಿಸಿ.

*ವಾರಕ್ಕೊಮ್ಮೆ ನೀರು ಬದಲಾಯಿಸಿ ಅಕ್ವೇರಿಯಮ್‌ ಸ್ವಚ್ಛಗೊಳಿಸಿ ನೀರು ಬದಲಾಯಿಸುತ್ತಾ ಇರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read