‘ವಂದೇ ಭಾರತ್’ ರೈಲಿನ ಲೋಕೋ ಪೈಲಟ್​ ಕ್ಯಾಬಿನ್​ ಹೇಗಿದೆ ಗೊತ್ತಾ ? ಇಲ್ಲಿದೆ ವಿಡಿಯೋ

ಹೊಸದಾಗಿ ಲೋಕಾರ್ಪಣೆಗೊಂಡಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ವಿವಿಧ ರೈಲು ಮಾರ್ಗಗಳಲ್ಲಿ ಸಂಚರಿಸುತ್ತಿದ್ದು ಒಂದಿಲ್ಲೊಂದು ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವಾರು ಪ್ರಯಾಣಿಕರು ವಂದೇ ಭಾರತ್​ ರೈಲಿನಲ್ಲಿ ತಮಗಾದ ಅನುಭವಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ.

ಅನೇಕರು ವಂದೇ ಭಾರತ್​​ನ ವೇಗ, ಶುಚಿತ್ವ ಹಾಗೂ ಆಹಾರದ ಗುಣಮಟ್ಟವನ್ನು ಕೊಂಡಾಡಿದ್ದಾರೆ . ಇದೀಗ ವಂದೇ ಭಾರತ್​ ರೈಲಿನ ಕುರಿತಾದ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ಈ ಎಲ್ಲದರ ನಡುವೆ ವಂದೇ ಭಾರತ್​​ಗೆ ಸಂಬಂಧಿಸಿದ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಲೋಕೋ ಪೈಲಟ್​ಗಳ ಜೊತೆಯಲ್ಲಿ ಪ್ರಯಾಣ ಮಾಡುವ ಅವಕಾಶ ಯುಟ್ಯೂಬರ್​ ಒಬ್ಬರಿಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಸೆರೆ ಹಿಡಿದ ಕೆಲವು ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಜರ್ನಿಸ್​​ ವಿಥ್​ ಎಕೆ ಎಂಬ ಯುಟ್ಯೂಬ್​ ಚಾನೆಲ್​​​ ಹೊಂದಿರುವ ಅಕ್ಷಯ್​ ಮಲ್ಹೋತ್ರಾ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ – ಗೋವಾ ವಂದೇ ಭಾರತ್​ ಎಕ್ಸ್​ಪ್ರೆಸ್​​ನಲ್ಲಿ ತಮ್ಮ ವ್ಲಾಗ್​ ಮಾಡಿದ್ದರು. ಇನ್​ಸ್ಟಾಗ್ರಾಂನಲ್ಲಿ ಈ ಸಂಬಂಧ ಒಂದು ಆಕರ್ಷಕ ರೀಲ್ಸ್​ ಹಂಚಿಕೊಂಡಿದ್ದಾರೆ. ಈ ರೀಲ್ಸ್​ ಈಗಾಗಲೇ 2 ಮಿಲಿಯನ್​ ವೀಕ್ಷಣೆ ಪಡೆದಿದೆ.

‘ಮುಂಬೈ ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಜರ್ನಿ’ ಎಂಬ ಶೀರ್ಷಿಕೆಯ ಅವರ ವಿವರವಾದ ವ್ಲಾಗ್‌ನಲ್ಲಿ, ಅಕ್ಷಯ್ ರೈಲಿನ ವಿಶಾಲವಾದ ನೋಟದ ಪರಿಚಯ ಮಾಡಿದ್ದಾರೆ. ಮುಂಭಾಗದ ಕ್ಯಾಬಿನ್​ ಪ್ರವೇಶವು ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಹಿಂದಿನ ಕ್ಯಾಬಿನ್​​ನಲ್ಲಿಯೇ ಇದ್ದು ಶೂಟ್​ ಮಾಡಿದ್ದಾರೆ. ರೈಲಿನ ರೋಮಾಂಚನಕಾರಿ ಅನುಭವವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಈ ವಿಡಿಯೋ ವೈರಲ್​ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read