ʼನಿದ್ರಾಹೀನತೆʼ ನಂತ್ರ ಕಾಡುವ ಕೋಪವನ್ನು ಹೀಗೆ ನಿಯಂತ್ರಿಸಿ

ಆರೋಗ್ಯವಾಗಿರಲು ಪ್ರತಿದಿನ 8 ರಿಂದ 9 ಗಂಟೆ ನಿದ್ರೆ ಅವಶ್ಯಕ. ಕೆಲವರಿಗೆ ಒತ್ತಡ ಸೇರಿದಂತೆ ಅನೇಕ ಕಾರಣಗಳಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಬೆಳಿಗ್ಗೆ ಕಿರಿಕಿರಿ ಶುರುವಾಗುತ್ತದೆ. ಸಣ್ಣ ವಿಷ್ಯಕ್ಕೂ ಕೋಪ ಬರುತ್ತದೆ.

ನಿದ್ರೆಯ ಕೊರತೆಯಿಂದ ಉಂಟಾಗುವ ಕಿರಿಕಿರಿ ಮತ್ತು ಕೋಪ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು.

ನಿದ್ರೆಯ ಕೊರತೆಯಿಂದ ಬರುವ ಕೋಪವನ್ನು ಕಡಿಮೆ ಮಾಡಲು, ಮೊದಲು ನಿದ್ರೆ ಮಾಡಬೇಕು. ಸ್ವಲ್ಪ ಹೊತ್ತು ನಿದ್ರೆ ಮಾಡಿದ್ರೆ ಮೂಡ್ ಸರಿಯಾಗುತ್ತದೆ.

ಒತ್ತಡದಿಂದಾಗಿ ಕೆಲವರಿಗೆ ನಿದ್ರೆ ಬರುವುದಿಲ್ಲ. ತಜ್ಞರನ್ನು ಸಂಪರ್ಕಿಸಿ ಧ್ಯಾನ ಮಾಡಲು ಪ್ರಾರಂಭಿಸಿ. ನಿದ್ರಾಹೀನತೆ ಹೋಗಲಾಡಿಸುವ ವ್ಯಾಯಾಮ ಮಾಡಿ.

ನಿದ್ರೆಯ ಕೊರತೆಯಿಂದ ಬರುವ ಕೋಪವನ್ನು ಕಡಿಮೆ ಮಾಡಲು, ತಕ್ಷಣ ಆಳವಾದ ಮತ್ತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಇದು ಮೆದುಳಿಗೆ ಸಾಕಷ್ಟು ಆಮ್ಲಜನಕವನ್ನು ನೀಡುತ್ತದೆ. ಆಗ ಕೋಪ ಕಡಿಮೆಯಾಗುತ್ತದೆ.

ಬೆಳಿಗ್ಗೆ ಮೂಡ್ ಸರಿಯಿಲ್ಲವೆಂದ್ರೆ ಹಾಸ್ಯಗಳನ್ನು ಕೇಳಿ. ಇಲ್ಲವೆ ಮನಸ್ಥಿತಿ ಸರಿ ಮಾಡುವ ಹಾಡುಗಳನ್ನು ಕೇಳಿ. ಇದು ಮೂಡ್ ಬದಲಾಯಿಸಿ, ಕೋಪ ಕಡಿಮೆ ಮಾಡುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read