ಜಿಮ್ ಗೆ ಹೋಗುವ ಗೀಳು ಇರೋರು ಓದಲೇಬೇಕಾದ ಸುದ್ದಿ ಇದು

ಜಿಮ್ ಗೆ ಹೋಗಿ ಸಖತ್ ಬಾಡಿ ಬೆಳೆಸಬೇಕು ಅನ್ನೋದು ಅನೇಕ ಹುಡುಗರ ಕನಸು. ಅದಕ್ಕಾಗಿ ಮೂರು ನಾಲ್ಕು ಗಂಟೆ ಜಿಮ್ ನಲ್ಲಿ ಕಳೆಯುತ್ತಾರೆ. ಈಗ ಸಿಕ್ಸ್ ಪ್ಯಾಕ್ ಫ್ಯಾಷನ್ ಆಗ್ಬಿಟ್ಟಿದೆ. ಆದ್ರೆ ಬಾಡಿ ಬೆಳೆಸುವ ಕನಸುಳ್ಳ ಹುಡುಗರಿಗೊಂದು ಎಚ್ಚರಿಕೆಯ ಸುದ್ದಿ.

ವರ್ಕ್ ಔಟ್ ನಿಂದ ಬಂಜೆತನ ಬರುವ ಸಾಧ್ಯತೆ ಇದೆಯಂತೆ. ಸಂಶೋಧನೆಯೊಂದು ಈ ವಿಷಯವನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ಹೆಚ್ಚು ಸಮಯ ವ್ಯಾಯಾಮ ಮಾಡುವುದರಿಂದ ಹಾಗೂ ತಪ್ಪು ರೀತಿಯಲ್ಲಿ ಜಿಮ್ ಮಾಡುವುದರಿಂದ ಬಂಜೆತನ ಬರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಹೆಚ್ಚು ಹೊತ್ತು ವ್ಯಾಯಾಮ ಮಾಡುವುದರಿಂದ ಹಾಗೂ ಭಾರ ಎತ್ತುವುದರಿಂದ ವೀರ್ಯ ದುರ್ಬಲವಾಗುತ್ತದೆಯಂತೆ.

ಜಿಮ್ ಗೆ ಹೋಗುವ ಶೇಕಡಾ 20 ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆಯಂತೆ. ತಪ್ಪಾಗಿ ವ್ಯಾಯಾಮ ಮಾಡುವುದೇ ಇದಕ್ಕೆ ಮುಖ್ಯ ಕಾರಣವಂತೆ. ಹಾಗಾಗಿ ಮೊದಲ ಬಾರಿ ಜಿಮ್ ಗೆ ಹೋಗುವವರು ತರಬೇತುದಾರರಿಂದ ಸರಿಯಾದ ಮಾರ್ಗದರ್ಶನ ಪಡೆಯಬೇಕೆಂದು ವೈದ್ಯರು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read