ʼಲವಂಗʼದ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಜಗತ್ತಿನಲ್ಲಿ ಬಹುತೇಕ ಜನರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆರ್ಥಿಕ ತೊಂದರೆ ಎಲ್ಲದಕ್ಕೂ ಮೂಲ ಕಾರಣವಾಗಿರುತ್ತದೆ. ಸಮಸ್ಯೆಯಿಂದ ಹೊರಬರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ.

ಆದ್ರೆ ಫಲ ಸಿಗೋದು ಕಷ್ಟ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲ ಸಮಸ್ಯೆಗೂ ಪರಿಹಾರ ಹೇಳಲಾಗಿದೆ. ಒಂದು ಲವಂಗ ನಿಮ್ಮ ಅದೃಷ್ಟ ಬದಲಿಸಬಲ್ಲದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಪೂಜೆ, ಅಡುಗೆ ಜೊತೆ ಔಷಧಿಯಾಗಿಯೂ ಈ ಲವಂಗವನ್ನು ಬಳಸಲಾಗುತ್ತದೆ. ಈ ಲವಂಗ ಮನೆಯ ನಕಾರಾತ್ಮಕ ಶಕ್ತಿ ದೂರ ಮಾಡುತ್ತದೆ. ಲವಂಗದ ಅನೇಕ ಉಪಯೋಗಗಳ ಬಗ್ಗೆ ಶಾಸ್ತ್ರದಲ್ಲಿ ಹೇಳಲಾಗಿದೆ.

ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು.ಇದ್ರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ. ಹಾಗೆ ಇದರ ಬೂದಿಯನ್ನು ಇಡೀ ಮನೆಗೆ ಸಿಂಪಡಿಸಬೇಕು.

ಹೀಗೆ ಮಾಡಿದ್ರೆ ಮನೆಯೊಳಗಿನ ನಕಾರಾತ್ಮಕ ಶಕ್ತಿ ಸಂಪೂರ್ಣ ನಾಶವಾಗುತ್ತದೆ. ಬೇರೆಯವರಿಂದ ಸಾಲ ಪಡೆದಿದ್ದು, ಅದನ್ನು ತೀರಿಸಲು ಸಮಸ್ಯೆಯಾಗ್ತಿದ್ದರೆ ಅಮವಾಸ್ಯೆ ಅಥವಾ ಹುಣ್ಣಿಮೆ ದಿನ 11-12 ಲವಂಗವನ್ನು ಕರ್ಪೂರದ ಜೊತೆ ಹಚ್ಚಿ. ಲಕ್ಷ್ಮಿಯನ್ನು ನೆನೆದು ನಿಮ್ಮ ಸಮಸ್ಯೆ ಹೇಳಿ.

ಸಂದರ್ಶನಕ್ಕೆ ತೆರಳುವವರು ನೀವಾಗಿದ್ದರೆ ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತನನ್ನು ನೆನೆದು, ನಿಮ್ಮ ಬೇಡಿಕೆ ಮುಂದಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read