‘ಸಕ್ಕರೆ ಕಾಯಿಲೆ’ ನಿಯಂತ್ರಣಕ್ಕೆ ಸೇವಿಸಿ ಮನೆಯಲ್ಲೇ ತಯಾರಿಸಿದ ಈ ಆಯುರ್ವೇದಿಕ್‌ ಚೂರ್ಣ

ಸಕ್ಕರೆ ಕಾಯಿಲೆ ಒಮ್ಮೆ ವಕ್ಕರಿಸಿಕೊಂಡ್ರೆ ಜೀವನ ಪರ್ಯಂತ ಅದರಿಂದ ಮುಕ್ತಿ ಪಡೆಯುವುದು ಕಷ್ಟ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಅಧಿಕವಾಗಿದ್ದರೆ, ಸಕ್ಕರೆಯ ಮಟ್ಟವು ತಕ್ಷಣವೇ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಧುಮೇಹದ ಚಿಕಿತ್ಸೆಗಾಗಿ ಸಾಮಾನ್ಯವಾಗಿ ಎಲ್ಲರೂ ಔಷಧಿಗಳ ಮೇಲೆ ಅವಲಂಬಿತರಾಗುತ್ತಾರೆ.

ಈ ಔಷಧಿಗಳು ಅನೇಕ ಹೊಸ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ನೈಸರ್ಗಿಕ ವಿಧಾನಗಳಿಂದಲೂ ಮಧುಮೇಹವನ್ನು ನಿಯಂತ್ರಿಸುವುದು ಉತ್ತಮ. ನಮ್ಮ ಮನೆಯಲ್ಲೇ ಇರುವ ಕೆಲವು ವಸ್ತುಗಳ ಸಹಾಯದಿಂದ ಚೂರ್ಣವನ್ನು ತಯಾರಿಸಿ ಸೇವನೆ ಮಾಡಬಹುದು.

ನೆಲ್ಲಿಕಾಯಿ ಚೂರ್ಣ: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ನೆಲ್ಲಿಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಪೋಷಕಾಂಶಗಳು ಚಯಾಪಚಯವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತವೆ.

ಮೆಂತ್ಯ ಚೂರ್ಣ: ಮೆಂತ್ಯದ ಕಾಳುಗಳು ಮಧುಮೇಹಕ್ಕೆ ಪ್ರಯೋಜನಕಾರಿ. ಮೆಂತ್ಯವನ್ನು ಸ್ವಲ್ಪ ಹುರಿದು ಪುಡಿ ಮಾಡಿ ಪ್ರತಿದಿನ ಬೆಳಗ್ಗೆ ಒಂದು ಚಮಚ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೆಂತ್ಯವು ದೇಹದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ದಾಲ್ಚಿನ್ನಿ ಚೂರ್ಣ: ದಾಲ್ಚಿನ್ನಿ ನೈಸರ್ಗಿಕ ಜೈವಿಕ ಸಕ್ರಿಯಗಳನ್ನು ಹೊಂದಿರುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಬಲ್ಲದು. ದಾಲ್ಚಿನ್ನಿಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಚಮಚ ತಿನ್ನಿರಿ.

ನೇರಳೆ ಬೀಜದ ಚೂರ್ಣ: ನೇರಳೆ ಬೀಜ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದರ ಬೀಜಗಳು ಮಧುಮೇಹಕ್ಕೂ ಪ್ರಯೋಜನಕಾರಿ. ಎಂಟಿಒಕ್ಸಿಡೆಂಟ್‌ಗಳು ಈ ಬೀಜಗಳಲ್ಲಿ ಹೇರಳವಾಗಿ ಇರುತ್ತವೆ. ನೇರಳೆ ಬೀಜಗಳ ಪುಡಿಯನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ನುಗ್ಗೇ ಎಲೆಯ ಚೂರ್ಣ: ಸಕ್ಕರೆ ಕಾಯಿಲೆ ಇರುವವರಿಗೆ ನುಗ್ಗೇಕಾಯಿ ಸೇವನೆ ಅತ್ಯಂತ ಸೂಕ್ತ. ನುಗ್ಗೇ ಹೂವುಗಳು, ಕಾಂಡಗಳು ಮತ್ತು ಎಲೆಗಳು ಕೂಡ ಆಯುರ್ವೇದ ಗುಣಗಳನ್ನು ಹೊಂದಿದ್ದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನುಗ್ಗೇ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read