ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು

 

ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ.

ಅನೇಕರಿಗೆ ಯಾವುದೆ ಔಷಧಿ ಪರಿಣಾಮ ಬೀರುವುದಿಲ್ಲ. ಅಂತವರಿಗೊಂದು ಉತ್ತಮ ಮನೆ ಮದ್ದು ಇಲ್ಲಿದೆ. ಪಾದಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಯೂ ಇದರಿಂದ ದೂರವಾಗುತ್ತದೆ.

ಈ ಮನೆ ಮದ್ದು ಮಾಡಲು ಬೇಕಾಗುವ ಪದಾರ್ಥ :

ಒಂದು ಕಪ್ ಔಷಧೀಯ ಆಲ್ಕೋಹಾಲ್

10 ಆಸ್ಪಿರಿನ್ ಮಾತ್ರೆಗಳು

1 ಚಮಚ ಅರಿಶಿನ ಪುಡಿ

ಮನೆ ಮದ್ದು ಮಾಡುವ ವಿಧಾನ :

ಮೊದಲು ಒಂದು ಪ್ಲಾಸ್ಟಿಕ್ ಬಟ್ಟಲಿನಲ್ಲಿ ಆಲ್ಕೋಹಾಲ್ ಹಾಕಿ, ಅದಕ್ಕೆ ಅರಿಶಿನದ ಪುಡಿಯನ್ನು ಬೆರೆಸಿ ಮಿಕ್ಸ್ ಮಾಡಿ. ನಂತ್ರ ಆಸ್ಪಿರಿನ್ ಮಾತ್ರೆಯನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿ.

ಈ ಮಿಶ್ರಣವನ್ನು 24 ಗಂಟೆಯವರೆಗೆ ಮುಚ್ಚಿಡಿ. ನಂತ್ರ ಪ್ರತಿದಿನ ರಾತ್ರಿ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಿ, ಪಾದವನ್ನು ಕವರ್ ಮಾಡಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ಸ್ವಚ್ಛವಾಗಿ ತೊಳೆದು ಕ್ರೀಂ ಹಚ್ಚಿಕೊಳ್ಳಿ. ಕೆಲ ದಿನ ಹೀಗೆ ಮಾಡಿದ್ರೆ ನಿಮಗೆ ಪರಿಣಾಮ ತಿಳಿಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read