ಪ್ರಕೃತಿ ಪ್ರಿಯರ ಮನಸೆಳೆಯುತ್ತೆ ಧುಮ್ಮಿಕ್ಕುವ ಈ ಜಲಪಾತ

ಕೊರೊನಾ ಕಾರಣದಿಂದ ಬಹುತೇಕ ಪ್ರವಾಸಗಳಿಗೆ ಬ್ರೇಕ್ ಬಿದ್ದಿದೆ. ಕೆಲವು ರಾಜ್ಯಗಳು ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಹಲವು ಪ್ರವಾಸಿ ತಾಣಗಳು ಇನ್ನೂ ತೆರೆದುಕೊಂಡಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಜಲಪಾತಗಳ ವಿಡಿಯೋಗಳು ವೈರಲ್ ಅಗಿದ್ದು ಮಹಾರಾಷ್ಟ್ರದ ಅಂಬೋಲಿ ಜಲಪಾತ ಅವುಗಳ ಪೈಕಿ ಒಂದಾಗಿದೆ.

ನಿಸರ್ಗದ ಸೊಬಗಿನ ಮಧ್ಯೆ ಉಕ್ಕಿ ಹರಿದು ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರ ನೆಚ್ಚಿನ ತಾಣ. ಭಾರತದ ಪಶ್ಚಿಮ ಭಾಗದ ಸಹ್ಯಾದ್ರಿ ಬೆಟ್ಟಗಳಲ್ಲಿ ಇರುವ ಈ ಜಲಪಾತ ಅಂಬೋಲಿ ಗಿರಿಧಾಮದ ಬಳಿ ಇದೆ. ಇಲ್ಲಿ ಅಪರೂಪದ ಸಸ್ಯ ಮತ್ತು ಪ್ರಾಣಿವರ್ಗಗಳಿವೆ.

ಇಲ್ಲಿ ವರ್ಷಪೂರ್ತಿ ಆಹ್ಲಾದಕರ ವಾಯುಗುಣ ಇದ್ದು ಗೋವಾ ಮತ್ತು ಬೆಳಗಾವಿಗೆ ಸಮೀಪದಲ್ಲಿರುವುದರಿಂದ ಅಲ್ಲಿನ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿಗೆ ತೆರಳಲು ಮಾನವ ನಿರ್ಮಿತ ಮೆಟ್ಟಿಲುಗಳಿವೆ. ರುಚಿಕರವಾದ ತಿಂಡಿ ತಿನಿಸುಗಳು ಇಲ್ಲಿ ಸಿಗುತ್ತದೆ. ಮಳೆಗಾಲದಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಯೋಜನೆ ರೂಪಿಸಿಯೇ ಪ್ರಯಾಣಿಸುವುದು ಬಹಳ ಮುಖ್ಯ. ಇದರ ಸಮೀಪದಲ್ಲಿರುವ ಅಂಬೋಲಿ ಫಾರೆಸ್ಟ್ ಪಾರ್ಕ್, ಮಹಾದೇವ್ಗಡ್ ಪಾಯಿಂಟ್ ಮತ್ತು ಕವಲೆ ಸಾಡ್ ಪಾಯಿಂಟ್ ಗಳಿಗೂ ಭೇಟಿ ಕೊಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read