ಸಾಮಾನ್ಯವಾಗಿ ಹೆಚ್ಚಿನ ಜನರು ಸ್ಮಶಾನದ ಬಗ್ಗೆ ಯೋಚಿಸಿದಾಗ, ಅದು ಸಾವು ಮತ್ತು ದುಃಖಕ್ಕೆ ಸಂಬಂಧಿಸಿದ ಒಂದು ದುಃಖಕರ ಮತ್ತು ಖಿನ್ನತೆಯ ಸ್ಥಳವೆಂದು ಹೇಳುತ್ತಾರೆ.
ಆದಾಗ್ಯೂ, ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಸಾದಲ್ಲಿರುವ ಸ್ಮಶಾನವು ತನ್ನ ಸೌಂದರ್ಯ ಮತ್ತು ಸೌಕರ್ಯಗಳೊಂದಿಗೆ ಜನರ ಈ ಸಾಮಾನ್ಯ ಗ್ರಹಿಕೆಗೆ ಸವಾಲು ಹಾಕುತ್ತಿದೆ. ಇಲ್ಲಿ ಜನ ಪ್ರೀವೆಡ್ಡಿಂಗ್ ಶೂಟ್ ಮಾಡುವಷ್ಟು ಸ್ಮಶಾನ ಆಕರ್ಷಕವಾಗಿದೆ.
12,000 ಚದರ ಅಡಿ ವಿಸ್ತೀರ್ಣದ ಈ ಸ್ಮಶಾನ ಪ್ರದೇಶವನ್ನ 5 ರಿಂದ 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದಿಸಾ ಸ್ಮಶಾನವನ್ನು ಪ್ರೀತಿಪಾತ್ರರಿಗೆ ಅಂತಿಮ ವಿಶ್ರಾಂತಿ ಸ್ಥಳವಾಗಿ ವಿನ್ಯಾಸಗೊಳಿಸಲಾಗಿದೆ.
ಆದಾಗ್ಯೂ ಅದರ ಸೌಂದರ್ಯ ಮತ್ತು ವಿಶಿಷ್ಟ ವೈಶಿಷ್ಟ್ಯಗಳು ಇದನ್ನು ಇತರ ಕಾರ್ಯಕ್ರಮಗಳಿಗೆ ಜನಪ್ರಿಯ ತಾಣವನ್ನಾಗಿ ಮಾಡಿದೆ. ಸ್ಮಶಾನದ ಕೆಲಸವು 80% ಪೂರ್ಣಗೊಂಡಿದ್ದರೂ ಇದು ಈಗಾಗಲೇ ಪಿಕ್ನಿಕ್, ಪ್ರೀವೆಡ್ಡಿಂಗ್ ಫೋಟೋ ಶೂಟ್ ಮತ್ತು ಹುಟ್ಟುಹಬ್ಬದ ಆಚರಣೆಗಳಿಗೆ ಬರುವ ಅನೇಕ ಪ್ರವಾಸಿಗರನ್ನು ಆಕರ್ಷಿಸಿದೆ.