ಖಿನ್ನತೆಯನ್ನು ನಿವಾರಿಸಿ ನಮ್ಮನ್ನು ಸಂತೋಷವಾಗಿಡುತ್ತೆ ಈ ಹಣ್ಣು…!

ನಮ್ಮ ನಿತ್ಯದ ಬದುಕಿನಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ತಪ್ಪಿಸಲು ನಾವು ಸಾಕಷ್ಟು ಕಸರತ್ತು ಮಾಡಿದ್ರೂ ಸಾಧ್ಯವಾಗುವುದಿಲ್ಲ. ಒತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಹಾಯದಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಬಾಳೆಹಣ್ಣು ವಿಟಮಿನ್ B6ನ ಉತ್ತಮ ಮೂಲವಾಗಿದೆ. ನಮ್ಮ ದೇಹಕ್ಕೆ ಈ ವಿಟಮಿನ್ ಪ್ರತಿದಿನ ಬೇಕಾಗುತ್ತದೆ.

ಬಾಳೆಹಣ್ಣು ತಿನ್ನುವುದರಿಂದ ಅಗತ್ಯ ವಿಟಮಿನ್‌ನಲ್ಲಿ ಶೇ.25ರಷ್ಟನ್ನು ಪಡೆಯಬಹುದು. ಇದಲ್ಲದೆ ಬಾಳೆಹಣ್ಣನ್ನು ತಿನ್ನುವುದರಿಂದ ದೈನಂದಿನ ಸೇವನೆಯ 10 ಪ್ರತಿಶತದಷ್ಟು ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಅನ್ನು ಸಹ ಪಡೆಯುತ್ತೀರಿ.

ಪೋಷಕಾಂಶ – ಬಾಳೆಹಣ್ಣು ನೈಸರ್ಗಿಕವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಮುಕ್ತವಾಗಿದೆ. ಆದ್ದರಿಂದ ಅದನ್ನು ಆಹಾರದಲ್ಲಿ ಸೇರಿಸುವುದು ಪ್ರಯೋಜನಕಾರಿಯಾಗಿದೆ. ಸಂಶೋಧನೆಯ ಪ್ರಕಾರ, ಬಾಳೆಹಣ್ಣುಗಳು ಜೈವಿಕ ಸಕ್ರಿಯ ಸಂಯುಕ್ತಗಳಾದ ಕ್ಯಾರೊಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ಹೃದ್ರೋಗದಿಂದ ಹಿಡಿದು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಆಹಾರ ಸ್ನೇಹಿ – ಒಂದು ಬಾಳೆಹಣ್ಣು 110 ಕ್ಯಾಲೋರಿಗಳು, 30 ಗ್ರಾಂ ಕಾರ್ಬೋಹೈಡ್ರೇಟ್‌, 3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಇದು ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ, ಜೀರ್ಣಕಾರಿ ಆರೋಗ್ಯಕ್ಕೆ ಒಳ್ಳೆಯದು. ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿರ್ವಹಿಸುತ್ತದೆ.

ರಕ್ತದೊತ್ತಡ ನಿಯಂತ್ರಣ – ಬಾಳೆಹಣ್ಣು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಒಂದು ಬಾಳೆಹಣ್ಣು 422 ಮಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ ಮತ್ತು ಇದು ಸೋಡಿಯಂ ಮುಕ್ತವಾಗಿದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದರೆ, ಅದು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ದೈನಂದಿನ ಪೊಟ್ಯಾಸಿಯಮ್‌ನ 10 ಪ್ರತಿಶತವನ್ನು ಪೂರೈಸುತ್ತದೆ.

ಎಂಟಿವೈರಲ್ ಮತ್ತು ಎಂಟಿಮೈಕ್ರೊಬಿಯಲ್ ಗುಣಲಕ್ಷಣ – ಬಾಳೆಹಣ್ಣಿನಲ್ಲಿ ಕಂಡುಬರುವ ವಿಶೇಷ ಪ್ರೋಟೀನ್ ಎಂಟಿಮೈಕ್ರೊಬಿಯಲ್ ಮತ್ತು ಎಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಬಾಳೆಹಣ್ಣಿನಲ್ಲಿ ಇರುವ ಜೈವಿಕ ಸಕ್ರಿಯ ಸಂಯುಕ್ತಗಳಾದ ಫೆರುಲಿಕ್ ಆಮ್ಲ, ಲುಪಿಯೋಲ್ ಮತ್ತು ಲೆಪ್ಟಿನ್ ಕೂಡ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಬಾಳೆಹಣ್ಣಿನ ಸೇವನೆಯು ಅನೇಕ ರೀತಿಯ ಸೋಂಕುಗಳನ್ನು ತೊಡೆದುಹಾಕಲು ಪ್ರಯೋಜನಕಾರಿಯಾಗಿದೆ. ಅತಿಸಾರ ಮತ್ತು ಚಿಕನ್‌ ಫಾಕ್ಸ್‌ ಇದ್ದಾಗ ಇದನ್ನು ತಿನ್ನಬಹುದು. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ.

ಖಿನ್ನತೆಯಿಂದ ರಕ್ಷಣೆ – ಬಾಳೆಹಣ್ಣು ತಿನ್ನುವುದರಿಂದ ಮೂಡ್ ಕೂಡ ಚೆನ್ನಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ನರಪ್ರೇಕ್ಷಕಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಒಂದು ಅಧ್ಯಯನದ ಪ್ರಕಾರ ದೇಹದಲ್ಲಿ ವಿಟಮಿನ್ ಬಿ 6 ಕೊರತೆಯಿದ್ದರೆ ಅದು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನ ಸೇವನೆಯಿಂದ ಇದನ್ನು ನಿವಾರಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read