ʼಅದೃಷ್ಟʼ ತರುತ್ತೆ ಮನೆಯಲ್ಲಿಡುವ ಈ ಗರಿ

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗಳು ಆದಷ್ಟು ಬೇಗ ಶ್ರೀಮಂತರಾಗ್ಲಿ ಎಂದು ಬಯಸ್ತಾರೆ. ಇದಕ್ಕೆ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ. ಆದ್ರೆ ಎಲ್ಲರನ್ನೂ ಅದೃಷ್ಟ ಕೈಹಿಡಿಯುವುದಿಲ್ಲ. ಹಣ ಕೈನಲ್ಲಿ ನಿಲ್ಲದೆ ಹೋದವರು ಕೆಲವೊಂದು ವಾಸ್ತು ಶಾಸ್ತ್ರಗಳನ್ನು ಅನುಸರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಕೆಲ ನಿಯಮಗಳನ್ನು ಪಾಲಿಸಿದ್ರೆ ಕೆಲವೇ ದಿನಗಳಲ್ಲಿ ಶ್ರೀಮಂತರಾಗಬಹುದು.

ವಾಸ್ತ್ರ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾರಿವಾಳ ಅಥವಾ ಕಾಗೆಗಳ ಗರಿ ಇಡುವುದು ತುಂಬಾ ಶುಭವೆಂದು ಹೇಳಲಾಗುತ್ತದೆ. ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸಿದರೆ ಪಾರಿವಾಳ ಅಥವಾ ಕಾಗೆಗಳ ಗರಿಗಳನ್ನು ಬಿಳಿ ಬಟ್ಟೆಯಲ್ಲಿ ಕೆಂಪು ದಾರದಿಂದ ಕಟ್ಟಿ ಹಣವಿಡುವ ಜಾಗದಲ್ಲಿ ಇಡಬೇಕು.

ಇದ್ರಲ್ಲಿ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆಂದು ನಂಬಲಾಗಿದೆ. ಇದ್ರಿಂದ ಎಲ್ಲ ಆಸೆಗಳು ಈಡೇರುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಮನೆಯಲ್ಲಿ ಶಾಂತಿ ಮತ್ತು ಸಂಪತ್ತನ್ನು ಕಾಪಾಡಿಕೊಳ್ಳಲು, ಐದು ಮುಖದ ಹನುಮಾನ್ ಜಿ ವಿಗ್ರಹವನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇರಿಸಿ. ಅದನ್ನು ಪ್ರತಿದಿನ ಪೂಜಿಸಿ. ಇದ್ರಿಂದ ಮನೆ ವಾತಾವರಣ ಯಾವಾಗ್ಲೂ ಸಂತೋಷಕರವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read