ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ಆನೆ ನೋಡುಗರನ್ನು ಅಚ್ಚರಿಗೊಳಿಸುತ್ತೆ ವೈರಲ್‌ ವಿಡಿಯೊ……!

ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದರ ಪ್ರಕಾರ, ಬರ್ಲಿನ್ ಮೃಗಾಲಯದಲ್ಲಿರುವ ಪಾಂಗ್ ಫಾ ಹೆಸರಿನ ಈ ಆನೆ ತನ್ನ ಸೊಂಡಿಲಿನಿಂದ ಬಾಳೆಹಣ್ಣು ಸುಲಿದು ತಿನ್ನುತ್ತದೆ.

ತನಗೆ ಕೊಟ್ಟ ಬಾಳೆಹಣ್ಣನ್ನು ಎರಡು ತುಂಡುಗಳನ್ನಾಗಿ ಮಾಡಿ ಅದು ಎಷ್ಟರ ಮಟ್ಟಿಗೆ ಹಣ್ಣಾಗಿದೆ ಎಂದು ಪರಿಶೀಲಿಸುವ ಈ ಬುದ್ಧಿವಂತ ಆನೆ, ಒಂದು ವೇಳೆ ಅದು ತಿನ್ನಲು ಹದವಾಗಿಲ್ಲವೆಂದರೆ ತಿನ್ನುವುದಿಲ್ಲವಂತೆ….!

ಆನೆಗಳು ತಮ್ಮ ಸೊಂಡಿಲುಗಳನ್ನು ಹೇಗೆಲ್ಲಾ ಬಳಸಲು ಸಾಧ್ಯ ಎಂಬ ಬಗ್ಗೆ ಅಧ್ಯಯನವೊಂದನ್ನು ಮಾಡಲಾಗಿದ್ದು, ಆ ವರದಿಯಲ್ಲಿ ಪಾಂಗ್ ಫಾನ ಈ ಚತುರತೆಯನ್ನು ಉಲ್ಲೇಖಿಸಲಾಗಿದೆ.

ಆನೆ ಬಾಳೆಹಣ್ಣಿನ ಸಿಪ್ಪೆ ಸುಲಿಯುವುದನ್ನು ಈ ವಿಡಿಯೋದಲ್ಲಿ ನೀವೂ ನೋಡಿ ಎಂಜಾಯ್‌ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read