ನೀರಿನಲ್ಲಿ ಫೈಟಿಂಗ್​ ಮಾಡಿದ ವೃದ್ಧ ದಂಪತಿ: ಮುದ್ದು, ಮುದ್ದು ಎಂದ ನೆಟ್ಟಿಗರು

ಸಂಬಂಧ ಎಷ್ಟೇ ಗಾಢವಾಗಿದ್ದರೂ ಸಹ ಹಲವು ಸಮಯಗಳು ಕಳೆದ ಬಳಿಕ ಅದರ ತೀವ್ರತೆ, ಆ ಸಂಬಂಧದ ಮೇಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವೃದ್ಧ ದಂಪತಿಯ ಜೀವನದಲ್ಲಿ ಈ ಮಾತು ಅಕ್ಷರಶಃ ಸುಳ್ಳಾಗಿದೆ. ವೃದ್ಧ ದಂಪತಿ ಗಿಡಗಳಿಗೆ ನೀರುಣಿಸುವ ಸಂದರ್ಭದಲ್ಲಿ ಮೋಜು ಮಸ್ತಿ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ 1.7 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ.

ಗಿಡಕ್ಕೆ ನೀರುಣಿಸುವ ಸಂದರ್ಭದಲ್ಲಿ ಪತಿಯು ಪತ್ನಿಗೆ ಪೈಪ್​ನಿಂದ ನೀರು ಹಾಕಿದರೆ. ಪತ್ನಿಯು ಬಕೆಟ್​ನಲ್ಲಿದ್ದ ನೀರನ್ನೇ ಗಂಡನ ಕಡೆಗೆ ಹಾಕಿದ್ದಾಳೆ. ಈ ಮುದ್ದಾದ ಕ್ಷಣವನ್ನು ದೂರದಿಂದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು ಅದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಈ ಜಲಯುದ್ಧವನ್ನ ಮೊದಲು ಪತಿ ಆರಂಭಿಸಿದ್ರು, ಆಕೆಯು ನೈಸರ್ಗಿಕವಾಗಿಯೇ ತನ್ನನ್ನು ತಾನು ಬಚಾವ್​ ಮಾಡಿಕೊಂಡಿದ್ದಾರೆ. ನಿಮ್ಮನ್ನು ನೀವು ಎಂದಿಗೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read