ಬಿಳಿ ಕೂದಲನ್ನು ಮಾಯ ಮಾಡುತ್ತದೆ ಸುಲಭವಾಗಿ ತಯಾರಿಸಬಹುದಾದ ಈ ಹೇರ್ ಮಾಸ್ಕ್

ಆಲೂಗಡ್ಡೆ ಅತ್ಯಂತ ರುಚಿಕರ ತರಕಾರಿಗಳಲ್ಲೊಂದು. ಇದು ಕೂದಲಿನ ಆರೋಗ್ಯಕ್ಕೆ ಕೂಡ ಬೇಕು. ಆಲೂಗಡ್ಡೆ ಜ್ಯೂಸ್ ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅದು ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಆಲೂಗೆಡ್ಡೆ ರಸವು ನೆತ್ತಿಯ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ತಲೆಹೊಟ್ಟನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ರಸ  ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ ಆಲೂಗೆಡ್ಡೆ ಮತ್ತು ಮೊಸರಿನಿಂದ ತಯಾರಿಸಿದ ಹೇರ್ ಮಾಸ್ಕ್ ಅನ್ನು ನೀವು ಅನ್ವಯಿಸಿದರೆ, ನಿಮ್ಮ ಕೂದಲು ಸ್ಟ್ರಾಂಗ್ ಆಗುತ್ತದೆ. ನೀವು ಬಿಳಿ ಕೂದಲಿನಿಂದಲೂ ಮುಕ್ತರಾಗುತ್ತೀರಿ.

ಮೊಸರು ಮತ್ತು ಆಲೂಗಡ್ಡೆ ಹೇರ್ ಮಾಸ್ಕ್ ತಯಾರಿಸುವ ವಿಧಾನ: ಮೊದಲು ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದನ್ನು ಶೋಧಿಸಿಕೊಳ್ಳಿ. ಈ ಆಲೂಗೆಡ್ಡೆ ರಸಕ್ಕೆ 2 ರಿಂದ ಮೂರು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ಹೇರ್ ಮಾಸ್ಕ್ ಸಿದ್ಧವಾಗುತ್ತದೆ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಮತ್ತು ನೆತ್ತಿಗೆ ಕೂಡ ಚೆನ್ನಾಗಿ ಸವರಿಕೊಳ್ಳಿ. ನಿಧಾನವಾಗಿ ಮಸಾಜ್‌ ಮಾಡಿಕೊಂಡು ಒಂದು ಗಂಟೆ ಹಾಗೇ ಬಿಡಿ. ನಂತರ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ. ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಬಹುದು.

ಹೀಗೆ ಮಾಡುವುದರಿಂದ ನಿಮ್ಮ ಕೂದಲು ಬಲವಾಗುತ್ತದೆ. ಬಿಳಿ ಕೂದಲು ಕೂಡ ತಂತಾನೇ ಮಾಯವಾಗುತ್ತದೆ. ಆಲೂಗಡ್ಡೆ ವಿಟಮಿನ್ ಬಿ, ಸಿ, ಸತು ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಇದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಮೊಸರು ಉತ್ತಮ ಪ್ರೋಬಯಾಟಿಕ್ ಆಗಿದ್ದು, ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ ಮತ್ತು ಕೂದಲಿನ ಶುಷ್ಕತೆಯನ್ನು ತೆಗೆದುಹಾಕುತ್ತದೆ. ಈ ಎರಡೂ ವಸ್ತುಗಳನ್ನು ಒಟ್ಟಿಗೆ ಬಳಸುವುದರಿಂದ ಇದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read