ತ್ವರಿತವಾಗಿ ತೂಕ ಇಳಿಸಿಕೊಳ್ಳಲು ನೆರವಾಗಲಿದೆ ಈ ʼಪಾನೀಯʼ

ಅತಿ ಬೇಗ ಏರುವ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭವಲ್ಲ. ಎಷ್ಟೇ ಡಯಟ್, ವ್ಯಾಯಾಮ ಮಾಡಿದ್ರೂ ಕೆಲವೊಮ್ಮೆ ತೂಕ ಇಳಿಯುವುದಿಲ್ಲ. ತೂಕ ಇಳಿಸಿಕೊಳ್ಳಲು ಒಂದೇ ಒಂದು ಡ್ರಿಂಕ್ ನಿಮಗೆ ನೆರವಾಗಲಿದೆ.

ತುಳಸಿ ಮತ್ತು ಅಜ್ವೈನದ ನೀರು ಬೇಗ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತುಳಸಿ ಮತ್ತು ಅಜ್ವೈನ್ ನೀರು  ಪೋಷಕಾಂಶಗಳಿಂದ ಕೂಡಿದೆ. ತುಳಸಿ ಚಯಾಪಚಯ ಉತ್ತಮಗೊಳಿಸಿ, ತೂಕ ಇಳಿಸಲು ನೆರವಾಗುತ್ತದೆ. ಅಜ್ವೈನ ಹೊಟ್ಟೆ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ.

ಒಂದು ಚಮಚ ಅಜ್ವೈನ್ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ 4 ರಿಂದ 5 ತುಳಸಿ ಎಲೆಗಳೊಂದಿಗೆ ಅಜ್ವೈನ್ ಬೀಜದ ನೀರನ್ನು ಕುದಿಸಿ. ಜರಡಿ ಹಿಡಿದು ನೀರು ತಣ್ಣಗಾದ ಮೇಲೆ ಸೇವನೆ ಮಾಡಿ. ಪ್ರತಿದಿನ ಬೆಳಿಗ್ಗೆ ಸೇವನೆ ಮಾಡುವುದ್ರಿಂದ ನಷ್ಟವಾಗುವ ಸಾಧ್ಯತೆಯೂ ಇದೆ. ಹಾಗಾಗಿ ವಾರದಲ್ಲಿ ಮೂರು ದಿನ ಸೇವನೆ ಮಾಡಿ.

ಕೆಮ್ಮು ಮತ್ತು ಶೀತದಂತಹ ಉಸಿರಾಟದ ತೊಂದರೆಗಳನ್ನು ನಿವಾರಿಸುವಲ್ಲಿ ಅಜ್ವೈನ್ ಪ್ರಯೋಜನಕಾರಿ. ತುಳಸಿ ಉಸಿರಾಟದ ತೊಂದರೆಗಳಿಗೆ ಚಿಕಿತ್ಸೆ ನೀಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ತುಳಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read