ಸುಲಭವಾಗಿ ತಯಾರಿಸಿ ಮಕ್ಕಳು ಇಷ್ಟಪಟ್ಟು ಕುಡಿಯುವ ಈ ಪಾನೀಯ

ರೋಗ ನಿರೋಧಕ ಶಕ್ತಿ  ಹೆಚ್ಚಿಸಿಕೊಳ್ಳಲು ಹಲವು ವಿಧದ ಪಾನೀಯಗಳನ್ನು ತಯಾರಿಸಿ ಕುಡಿಯುತ್ತೀರ ಆದರೆ ಮಕ್ಕಳು ಇಷ್ಟಪಟ್ಟು ಕುಡಿಯುವ ಸಾಲಿಗೆ ಸೇರುವ  ಪಾನೀಯವನ್ನು ತಯಾರಿಸುವ ವಿಧಾನ ತಿಳಿಯೋಣ.

ಮಕ್ಕಳೂ ಇಷ್ಟಪಟ್ಟು ಸವಿಯುವ ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಫ್ರೆಶ್ ಆಗಿ ತಯಾರಿಸಿ ಕುಡಿಯುವುದು ಮುಖ್ಯ.

ಬಾದಾಮಿಯನ್ನು ಐದರಿಂದ ಆರು ಗಂಟೆ ಹೊತ್ತು ನೆನೆಸಿ ಸಿಪ್ಪೆ ತೆಗೆಯಿರಿ. ಅಷ್ಟೇ ಪ್ರಮಾಣದ ಖರ್ಜೂರವನ್ನು ಮೂರು ಗಂಟೆ ಹೊತ್ತು ನೀರಿನಲ್ಲಿ ನೆನೆಸಿ. ಬೀಜ ತೆಗೆದು ಎರಡನ್ನೂ ಮಿಕ್ಸಿಯಲ್ಲಿ ರುಬ್ಬಿ. ಜೊತೆಗೆ ಎರಡು ಚಿಟಿಕೆ ಅರಶಿನ ಪುಡಿ ಸೇರಿಸಿ.

ಕೃತಕ ಸಿಹಿ, ಸಕ್ಕರೆ ಅಥವಾ ಬೆಲ್ಲ ಸೇರಿಸುವ ಬದಲು ಜೇನುತುಪ್ಪ ಬೆರೆಸಿ. ಹಾಲು ಸೇರಿಸಿ ಮಿಲ್ಕ್ ಶೇಕ್ ರೀತಿಯಲ್ಲಿ ಕುಡಿಯಿರಿ. ಇದರಲ್ಲಿರುವ ಕ್ಯಾಲ್ಸಿಯಂ, ಮೂಳೆಗಳನ್ನು ದೃಢಪಡಿಸುತ್ತದೆ. ಆಂಟಿ ಬ್ಯಾಕ್ಟೀರಿಯಲ್ ಗುಣ, ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ. ಹಾಗಾಗಿ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಇದನ್ನು ಕುಡಿಯುವುದರಿಂದ ನೀವು ರೋಗಗಳಿಂದ ದೂರವಿರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read