ಅಮೆಜಾನ್‌ನಲ್ಲಿ ಲಭ್ಯವಿದೆ ಈ ಕೂಲ್ ಸ್ಕೂಟರ್; ಸಂಪೂರ್ಣ ಚಾರ್ಜ್‌ ಮಾಡಿದ್ರೆ ಓಡುತ್ತೆ 170 ಕಿಮೀ

ಆನ್‌ಲೈನ್‌ನಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೇಲೆ ಬಂಪರ್‌ ಡಿಸ್ಕೌಂಟ್‌ ಸಿಗ್ತಾ ಇದೆ. ಆಟೋಮೊಬೈಲ್ ಕಂಪನಿ iVoomiಯ ಎಲೆಕ್ಟ್ರಿಕ್ ಸ್ಕೂಟರ್ ಜೀತ್ ಕೂಡ ಅಮೇಜಾನ್‌ನಲ್ಲಿ ಲಭ್ಯವಿದೆ. ಇದನ್ನು ಕಂಪನಿಯ ಡೀಲರ್‌ಶಿಪ್‌ನಿಂದಲೂ ಖರೀದಿಸಬಹುದು. ಅಮೇಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಸೇಲ್ ನಡೆಯುತ್ತಿದ್ದು, ಈ ಸ್ಕೂಟರ್‌ ಮೇಲೆ ಯಾವುದೇ ಕೊಡುಗೆ ಇಲ್ಲ. ಆದರೂ ಇದು ಸವಾರರ ಪಾಲಿಗೆ ಬೆಸ್ಟ್‌ ಎಂದೇ ಹೇಳಬಹುದು.

iVoomy ಎಲೆಕ್ಟ್ರಿಕ್ ಸ್ಕೂಟರ್ 3 ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 2kW, 2.5kW ಮತ್ತು 3kW ಬ್ಯಾಟರಿ ಆಯ್ಕೆಗಳು ಸೇರಿವೆ. ಈ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿ.ಮೀ ಓಡಬಲ್ಲದು. ನಗರದಲ್ಲಿ ಓಡಿಸಲು ಉತ್ತಮ ಆಯ್ಕೆ ಇದು. Amazon ನಿಂದ 2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸ್ಕೂಟರ್‌ ಅನ್ನು ಖರೀದಿ ಮಾಡಬಹುದು. ಇತರ ಮಾಡೆಲ್‌ಗಳು ಕೂಡ ಶೀಘ್ರದಲ್ಲೇ ಅಮೇಜಾನ್‌ನಲ್ಲಿ ದೊರೆಯಲಿವೆ.

iVoomi ಯ ಈ ಸ್ಕೂಟರ್‌ನಲ್ಲಿ 1350mm ವ್ಹೀಲ್‌ಬೇಸ್ ಇದೆ. 5 ವರ್ಷಗಳ ವಾರಂಟಿಯಲ್ಲಿ ಲಭ್ಯವಿರುವ ಈ ಸ್ಕೂಟರ್‌ನಲ್ಲಿ ಒದಗಿಸಲಾದ ಬ್ಯಾಟರಿಯು IP67 ಅನ್ನು ಹೊಂದಿದೆ. ಇದನ್ನು 220V, 10A ಮತ್ತು 3 ಪಿನ್ ಮನೆಯ ಸಾಕೆಟ್‌ನಿಂದ ಚಾರ್ಜ್ ಮಾಡಬಹುದು. ಬ್ಲೂಟೂತ್ ಸಂಪರ್ಕದ ಜೊತೆಗೆ iVoomy ಸ್ಕೂಟರ್‌ನಲ್ಲಿ ಅನೇಕ ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳು ಲಭ್ಯವಿದೆ. ನ್ಯಾವಿಗೇಷನ್, ಅಲರ್ಟ್‌ ಸಿಸ್ಟಮ್‌ ಕೂಡ ಇದರಲ್ಲಿದೆ. ಸ್ಕೂಟರ್‌ನ ಮುಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆನ್ಷನ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 89,999 ರೂಪಾಯಿ. ಸ್ಕೂಟರ್‌ನ ಬ್ಯಾಟರಿ ಪ್ಯಾಕ್ 7kw ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read