ಭಾರತದಲ್ಲಿ ಈವರೆಗೆ 80 ಲಕ್ಷ ಸ್ಕೂಟರ್-ಬೈಕ್‌ಗಳನ್ನು ತಯಾರಿಸಿದೆ ಈ ಸಂಸ್ಥೆ…!

ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾ (SMIPL) ಭಾರತದಲ್ಲಿ 80 ಲಕ್ಷ ದ್ವಿಚಕ್ರ ವಾಹನಗಳನ್ನು ಈಗಾಗ್ಲೇ ಉತ್ಪಾದಿಸಿದೆ. ಕಂಪನಿಯು 2006ರ ಫೆಬ್ರವರಿಯಲ್ಲಿ ಗುರ್ಗಾಂವ್‌ನ ಖೇರ್ಕಿ ದೌಲಾದಲ್ಲಿನ ತನ್ನ ಕಾರ್ಖಾನೆಯಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸುಜುಕಿ ಆಕ್ಸೆಸ್ 125 ಅನ್ನು ಆರಂಭದಲ್ಲಿ ಉತ್ಪಾದಿಸಲಾಯಿತು. 80 ಲಕ್ಷ ದ್ವಿಚಕ್ರ ವಾಹನಗಳ ಉತ್ಪಾದನಾ ಅಂಕಿ-ಅಂಶವನ್ನು ದಾಟಲು ಕಂಪನಿಗೆ 18 ವರ್ಷಗಳು ಬೇಕಾಯಿತು.

ಕಂಪನಿಯು 40 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು 13 ವರ್ಷಗಳನ್ನು ತೆಗೆದುಕೊಂಡಿದೆ. ನಂತರ ಎರಡು ಪಟ್ಟು ಹೆಚ್ಚು ವೇಗದಲ್ಲಿ ಮುಂದೆ ಸಾಗುತ್ತಾ 40 ಲಕ್ಷ ವಾಹನಗಳನ್ನು ಕೇವಲ 6 ವರ್ಷಗಳಲ್ಲಿ ತಯಾರಿಸಿದೆ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ 19ನೇ ವರ್ಷದ ಕಾರ್ಯಾಚರಣೆಯಲ್ಲಿ 80 ಲಕ್ಷ ವಾಹನಗಳ ಉತ್ಪಾದನೆಯ ಗುರಿಯನ್ನು ದಾಟಿದೆ. ವಿಶೇಷವೆಂದರೆ ಕಳೆದ ಒಂದು ವರ್ಷದಲ್ಲಿ 10 ಲಕ್ಷ ವಾಹನಗಳನ್ನು ಉತ್ಪಾದಿಸಲಾಗಿದೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ದೊಡ್ಡ ಶ್ರೇಣಿಯ ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ನೀಡಿದೆ. ಕಂಪನಿಯ ದೇಸೀ ಶ್ರೇಣಿಯು 125cc ಸ್ಕೂಟರ್‌ಗಳಿಂದ 150cc-250cc ಮೋಟಾರ್‌ಸೈಕಲ್‌ಗಳವರೆಗೆ ಅನೇಕ ವೆರೈಟಿ ಬೈಕುಗಳು ಮಾರುಕಟ್ಟೆಗೆ ಬಂದಿವೆ. V-Strom 800 DE, ಕಟಾನಾ ಮತ್ತು ಹಯಾಬುಸಾದಂತಹ ಹೆಚ್ಚಿನ ಸಾಮರ್ಥ್ಯದ ಬೈಕುಗಳನ್ನು ಕೂಡ ಸಂಸ್ಥೆ ತಯಾರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read