39 ರ ಹರೆಯದಲ್ಲೇ ಅಜ್ಜಿ ; ಚೀನಾ ಮಹಿಳೆಯ ಯೌವನ ಕಂಡು ಬೆರಗಾದ ನೆಟ್ಟಿಗರು !

ಚೀನಾದ ಮಹಿಳೆಯೊಬ್ಬರು 39ನೇ ವಯಸ್ಸಿನಲ್ಲೇ ಅಜ್ಜಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಆಕೆಯ ಯೌವನದ ನೋಟ ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. 1985ರಲ್ಲಿ ಜನಿಸಿದ ಈ ಮಹಿಳೆ ಈಗ ಅಜ್ಜಿಯಾಗಿದ್ದಾರೆ.

ಸುಝೌ ಪ್ರಾಂತ್ಯದ ಈ ಮಹಿಳೆ ಮೊಮ್ಮಗನೊಂದಿಗೆ ಇರುವ ವಿಡಿಯೋ ವೈರಲ್ ಆಗಿದೆ. ಆಕೆ ಮೊಮ್ಮಗನಿಗೆ ಹಾಲುಣಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ. ಆಕೆಯ ಯೌವನದ ನೋಟ, ಮೈಕಟ್ಟು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ “1985ರಲ್ಲಿ ಜನಿಸಿದ ಅಜ್ಜಿ” ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದಾರೆ. ಆಕೆ ತನ್ನ ದೈನಂದಿನ ಜೀವನದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆಕೆ 39 ವರ್ಷದವರಾಗಿದ್ದರೂ, ಅಜ್ಜಿಯಂತೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಈ ಮಹಿಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಆಕೆಯ ಯೌವನದ ರಹಸ್ಯವೇನು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಕೆಲವರು ಆಕೆಯ ಜೀನ್ಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆಕೆಯ ಜೀವನಶೈಲಿಯನ್ನು ಹೊಗಳುತ್ತಿದ್ದಾರೆ.

ಈ ಮಹಿಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದಿವೆ. ಆಕೆಯ ಯೌವನ ಮತ್ತು ಸೌಂದರ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ. ಆದರೆ ವಿಶ್ವದ ಅತ್ಯಂತ ಕಿರಿಯ ಅಜ್ಜಿ ಎಂಬ ದಾಖಲೆ ನೈಜೀರಿಯಾ ಮಹಿಳೆ ಹೆಸರಿನಲ್ಲಿದೆ. ನೈಜೀರಿಯಾ ಮಹಿಳೆ 17 ನೇ ವಯಸ್ಸಿಗೇ ಅಜ್ಜಿಯಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read