ಎಚ್ಚರ: ಹೃದಯ ಬಡಿತದಲ್ಲಿನ ಈ ಬದಲಾವಣೆ ನಿರ್ಲಕ್ಷಿಸಿದ್ರೆ ಅಪಾಯ…!

 

ಹೃದಯ ಬಡಿತದ ಸಾಮಾನ್ಯ ವೇಗ ನಮಗೆಲ್ಲಾ ಗೊತ್ತಿದೆ. ಕೆಲವೊಮ್ಮೆ ಹೃದಯ ಬಡಿತದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.  ಉದಾಹರಣೆಗೆ ಇದ್ದಕ್ಕಿದ್ದಂತೆ ಹೃದಯ ಬಡಿತ ತುಂಬಾ ವೇಗವಾಗುವುದು ಅಥವಾ ನಿಧಾನವಾಗುವುದು. ಕೆಲವೊಮ್ಮೆ ಹೃದಯ ಬಡಿತ ನಿಯಮಿತವಾಗಿರುವುದಿಲ್ಲ ಅಥವಾ ಇದ್ದಕ್ಕಿದ್ದಂತೆ ನಿಂತುಹೋಗಬಹುದು. ಇದು ಸಂಭವಿಸಿದಾಗ ಅಪಾಯದ ಮುನ್ಸೂಚನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬದಲಾವಣೆಗಳನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಇದು ಹೃದ್ರೋಗದ ಲಕ್ಷಣವೂ ಆಗಿರಬಹುದು.

ವೇಗದ ಅಥವಾ ನಿಧಾನ ಹೃದಯ ಬಡಿತ

ನಮ್ಮ ಹೃದಯ ಬಡಿತವು ಸಾಮಾನ್ಯಕ್ಕಿಂತ ವೇಗವಾಗಿ ಅಥವಾ ನಿಧಾನವಾಗಿದ್ದಾಗ, ಅದು ಗಂಭೀರ ಸಮಸ್ಯೆಯ ಸಂಕೇತವಾಗಿರುತ್ತದೆ. ಸಾಮಾನ್ಯವಾಗಿ ಹೃದಯವು ನಿಮಿಷಕ್ಕೆ 60 ರಿಂದ 100 ಬಾರಿ ಬಡಿಯುತ್ತದೆ. 100 ದಾಟಿದರೆ ಅಥವಾ 60ಕ್ಕಿಂತ ಕಡಿಮೆ ಇದ್ದರೆ ಏನೋ ಸಮಸ್ಯೆಯಾಗಿದೆ ಎಂದು ಅರ್ಥಮಾಡಿಕೊಳ್ಳಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇದು ಹೃದ್ರೋಗದ ಲಕ್ಷಣವಾಗಿದ್ದಲ್ಲಿ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆ ಇರುತ್ತದೆ.

ಅನಿಯಮಿತ ಹೃದಯ ಬಡಿತ

ನಮ್ಮ ಹೃದಯ ಬಡಿತಗಳಲ್ಲಿ ಕ್ರಮಬದ್ಧತೆ ಇಲ್ಲದಿದ್ದರೆ ಅಂದರೆ ಒಮ್ಮೊಮ್ಮೆ ಬೇಗನೆ ಬಡಿದುಕೊಳ್ಳುವುದು ಅಥವಾ ತಡವಾಗಿ ಬಡಿಯುವುದು ಈ ರೀತಿ ಇದ್ದರೆ ಅದು ಕೂಡ ಗಂಭೀರ ಸಮಸ್ಯೆಯ ಸಂಕೇತವಾಗಿದೆ. ಸಾಮಾನ್ಯವಾಗಿ ಹೃದಯ ಬಡಿತಗಳ ನಡುವಿನ ಅಂತರವು ಒಂದೇ ಆಗಿರುತ್ತದೆ. ಕೆಲವೊಮ್ಮೆ ಎರಡು ಬಡಿತಗಳ ನಡುವಿನ ವ್ಯತ್ಯಾಸವು ಇದ್ದಕ್ಕಿದ್ದಂತೆ ದೀರ್ಘವಾಗಿರಬಹುದು, ನಂತರ ಕಡಿಮೆಯಾಗಲೂಬಹುದು. ಇದು ಹೃದಯ ಬಡಿತ ನಿಯಮಿತವಾಗಿಲ್ಲ ಎಂಬುದರ ಸಂಕೇತ. ಹೃದಯಾಘಾತ, ಹೃದಯ ಬಡಿತದ ಕೊರತೆ ಇತ್ಯಾದಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ.

ಹೃದಯ ಬಡಿತ ಸ್ಥಗಿತ

ನಿಮ್ಮ ಹೃದಯದ ಬಡಿತವು ಒಂದು ಸೆಕೆಂಡ್‌ಗೆ ನಿಂತುಹೋಗಿದೆ ಎಂದು ನಿಮಗೆ ಇದ್ದಕ್ಕಿದ್ದಂತೆ ಅನಿಸಿದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ. ಇದು ಹೃದಯದ ಗಂಭೀರ ಸಮಸ್ಯೆ ಎಂದು ಅರ್ಥಮಾಡಿಕೊಳ್ಳಿ, ಇದನ್ನು ‘ಹೃದಯ ಕಂಪನ’ ಎಂದು ಕರೆಯಲಾಗುತ್ತದೆ. ಹೃದಯದ ಸಮಸ್ಯೆಯಿಂದಾಗಿ ಹೃದಯ ಬಡಿತವು ಹಠಾತ್ತನೆ ನಿಂತುಹೋದಾಗ ಮತ್ತು ನಂತರ ಮತ್ತೆ ಪ್ರಾರಂಭವಾಗುವ ಸ್ಥಿತಿಯಾಗಿದೆ. ಈ ಸಮಯದಲ್ಲಿ ನಮಗೆ ಶಾಕ್ ಹೊಡೆದಂತೆನಿಸುತ್ತದೆ. ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಆದ್ದರಿಂದ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read