ಕ್ಷೌರಿಕನೇ ಕದ್ದು ಮಾರಿದ್ದ ಈ ಸೆಲೆಬ್ರಿಟಿಯ ಕೂದಲು; ಜಗತ್ತಿನಲ್ಲೇ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು…!

ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಗುರುತು, ವ್ಯಕ್ತಿತ್ವ ಮತ್ತು ಶೈಲಿಯನ್ನು ಹೇಳುತ್ತದೆ. ಪ್ರಸಿದ್ಧ ವ್ಯಕ್ತಿಯೊಬ್ಬರ ಕೂದಲಿಗೆ ಎಷ್ಟು ಬೆಲೆ ಇರಬಹುದು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಸೆಲೆಬ್ರಿಟಿಗಳ ಕೂದಲು ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.

ರಾಕ್ ಅಂಡ್ ರೋಲ್ ಎಂದು ಕರೆಯಲ್ಪಡುವ ಎಲ್ವಿಸ್ ಪ್ರೀಸ್ಲಿ ಅವರ ಕೂದಲು ಕೂಡ ಬಹಳ ದುಬಾರಿ ಬೆಲೆಗೆ ಬಿಕರಿಯಾಗಿದೆ. ಎಲ್ವಿಸ್‌ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರಂತೆಯೇ ಕಾಣಬೇಕು ಅನ್ನೋದು ಅಭಿಮಾನಿಗಳ ಬಯಕೆ. ನೆಚ್ಚಿನ ಹೀರೋನ ಹೇರ್‌ ಸ್ಟೈಲ್‌ ಕೂಡ ಕಾಪಿ ಮಾಡ್ತಾರೆ ಫ್ಯಾನ್ಸ್‌. ವಿಶೇಷವೆಂದರೆ ಎಲ್ವಿಸ್‌ ಪ್ರೀಸ್ಲಿ ಅವರ ಕೂದಲು ವಿಶ್ವದಲೇ ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದೆ.

ಕ್ಷೌರಿಕನೇ ಕದ್ದಿದ್ದ ಪ್ರೀಸ್ಲಿಯ ಕೂದಲು

2002ರಲ್ಲಿ ಎಲ್ವಿಸ್ ಅವರ ಕ್ಷೌರಿಕನೇ ಕೂದಲನ್ನು ಕಳವು ಮಾಡಿಬಿಟ್ಟಿದ್ದ. ಕೂದಲನ್ನು ಉದ್ದಕ್ಕೆ ಕತ್ತರಿಸಿ ಅದನ್ನು ಹರಾಜು ಹಾಕಿದ್ದ. ಅಪರಿಚಿತ ವ್ಯಕ್ತಿಯೊಬ್ಬರು ಈ ಕೂದಲಿಗೆ 115,120 ಡಾಲರ್ ಕೊಟ್ಟು ಖರೀದಿಸಿದ್ದರು. ಎಲ್ವಿಸ್ ಪ್ರೀಸ್ಲಿ ಬಿಟ್ಟರೆ ಅತ್ಯಂತ ದುಬಾರಿ ಕೂದಲು ಎನಿಸಿಕೊಂಡಿರೋದು ಚೆ ​​ಗುವೇರಾ ಅವರದ್ದು.

ಗುವೇರಾ ಕ್ಯೂಬಾದ ಕ್ರಾಂತಿಕಾರಿ ನಾಯಕ. ಈಗಲೂ ಅವರ ಫೋಟೋಗಳನ್ನು ಟಿ-ಶರ್ಟ್‌ಗಳ ಮೇಲೆ ಮುದ್ರಿಸಲಾಗುತ್ತದೆ. 2007 ರಲ್ಲಿ ಅವರ ಕೂದಲನ್ನು ಹರಾಜಿನಲ್ಲಿ 100,000 ಡಾಲರ್‌ಗೆ ಮಾರಾಟ ಮಾಡಲಾಯಿತು.

ಎಲ್ವಿಸ್ ಪ್ರೀಸ್ಲಿ, ಚೆ ಗುವೇರಾ ಅವರನ್ನು ಹೊರತುಪಡಿಸಿ ಇನ್ನೂ ಅನೇಕ ಪ್ರಸಿದ್ಧ ವ್ಯಕ್ತಿಗಳ ಕೂದಲನ್ನು ಹರಾಜಿನಲ್ಲಿ ಭಾರಿ ಬೆಲೆಗೆ ಮಾರಾಟ ಮಾಡಲಾಗಿದೆ. ಮರ್ಲಿನ್ ಮನ್ರೋ ಅವರ ಕೂದಲು 42,534 ಡಾಲರ್‌ಗೆ ಮಾರಾಟವಾದರೆ, ಜಾನ್ ಲೆನ್ನನ್ ಅವರ ಕೂದಲು 35,000 ಡಾಲರ್‌ಗೆ ಬಿಕರಿಯಾಗಿತ್ತು.

ಮರ್ಲಿನ್ ಮನ್ರೋ ಹಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಮರಣದ ನಂತರ ಅವರ ಕೂದಲನ್ನು ಅಪರಿಚಿತ ವ್ಯಕ್ತಿ ಖರೀದಿಸಿದ್ದ. ಜಾನ್ ಲೆನ್ನನ್ ಬೀಟಲ್ಸ್‌ನ ಪ್ರಮುಖ ಗಾಯಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರ ಕೊಲೆಯ ನಂತರ ಕೂದಲನ್ನು ಅಭಿಮಾನಿಯೊಬ್ಬರು ಖರೀದಿಸಿದರು. ಕೂದಲಿನ ಬೆಲೆ ಇವರ ಖ್ಯಾತಿಗೆ ಸಾಕ್ಷಿ, ಜೊತೆಗೆ ಅಭಿಮಾನಿಗಳ   ಪ್ರೀತಿಯನ್ನು ಪ್ರತಿನಿಧಿಸುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read