50ನೇ ವಯಸ್ಸಿನಲ್ಲಿ ಪದವಿ ಪಡೆದಿದ್ದಾರೆ ಈ ಬಾಲಿವುಡ್‌ ನಟಿ…!

ಕಲಿಕೆಗೆ ವಯಸ್ಸಿನ ಹಂಗಿಲ್ಲ. ಅನೇಕರು ವೃದ್ಧಾಪ್ಯದಲ್ಲೂ ಪರೀಕ್ಷೆ ಬರೆದು ಪದವಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್‌ ನಟಿ ಟ್ವಿಂಕಲ್‌ ಖನ್ನಾ ಕೂಡ ಇಂಥದ್ದೇ ಸಾಧನೆ ಮಾಡಿದ್ದಾರೆ. 50ನೇ ವಯಸ್ಸಿನಲ್ಲೂ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಟ್ವಿಂಕಲ್‌ ಸಾಧನೆಯನ್ನು ಪತಿ ಅಕ್ಷಯ್‌ ಕುಮಾರ್‌ ಕೊಂಡಾಡಿದ್ದಾರೆ.

ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಹಸಿರು ಸೀರೆ ಉಟ್ಟು ಕಂಗೊಳಿಸುತ್ತಿರುವ ಪತ್ನಿ ಟ್ವಿಂಕಲ್‌ ಫೋಟೋವನ್ನು ಅಕ್ಷಯ್‌ ಕುಮಾರ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಫೋಟೋದಲ್ಲಿ ಇಬ್ಬರ ಮುಖದಲ್ಲೂ ಮುದ್ದಾದ ನಗುವನ್ನು ಕಾಣಬಹುದು.

ಟ್ವಿಂಕಲ್ ಖನ್ನಾ ಮೇಲಿರುವ ಪ್ರೀತಿ ಮತ್ತು ಸಂತೋಷವನ್ನು ವ್ಯಕ್ತಪಡಿಸುವ ದೀರ್ಘವಾದ ಭಾವನಾತ್ಮಕ ಪೋಸ್ಟ್ ಅನ್ನು ಅಕ್ಕಿ ಶೇರ್‌ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ತಾನು ಓದು ಮುಂದುವರಿಸಬೇಕೆಂದು ಟ್ವಿಂಕಲ್‌ ಹೇಳಿದ್ದರಂತೆ. ಆದ್ರೆ ಅಕ್ಕಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪತ್ನಿ ಛಲ ಬಿಡದೇ ಪದವಿ ಪೂರ್ಣಗೊಳಿಸಿರುವುದು ಅಕ್ಷಯ್‌ಗೆ ಸಂತಸ ತಂದಿದೆ.

ಮನೆ, ಮಕ್ಕಳು ಮತ್ತು ಓದನ್ನು ಅದ್ಭುತವಾಗಿ ನಿಭಾಯಿಸುತ್ತಿರುವ ಪತ್ನಿಯನ್ನು ಸೂಪರ್ ಮಹಿಳೆ ಎಂದು ಕೊಂಡಾಡಿದ್ದಾರೆ. ಸದ್ಯ ಅಕ್ಷಯ್‌ ಕುಮಾರ್‌, ಬಹುನಿರೀಕ್ಷಿತ ಚಿತ್ರ ‘ಬಡೆ ಮಿಯಾ ಚೋಟೆ ಮಿಯಾ’ದಲ್ಲಿ ಕಾಣಿಸಿಕೊಳ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read