ದುಬಾರಿ ದೆಹಲಿಯ ಪ್ರತಿಷ್ಠಿತ ಏರಿಯಾದಲ್ಲಿ ಹೇರ್ ಕಟಿಂಗ್ ಸೇವೆ ಕೇವಲ 50 ರೂಪಾಯಿ..!

ದೆಹಲಿಯೆಂಬ ದುಬಾರಿ ದುನಿಯಾದಲ್ಲಿ ಅತಿ ಕಡಿಮೆ ಬೆಲೆಗೆ ಯಾವುದಾದರೂ ಸೇವೆ ಸಿಗುತ್ತಾ ಎಂದು ಹುಡುಕುವವರಿಗೆ ಅದರಲ್ಲೂ ವಿಶೇಷವಾಗಿ ಪುರುಷರ ಹೇರ್ ಕಟಿಂಗ್ ಸೇವೆಗೆ ಉತ್ತಮ ಜಾಗವೊಂದಿದೆ.

ಅದುವೇ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಮಾರುಕಟ್ಟೆಯಲ್ಲಿನ ರೋಹ್ತಾಸ್ ಸಿಂಗ್ ಅವರ ಕಟಿಂಗ್ ಶಾಪ್. ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಮಾರುಕಟ್ಟೆಯಲ್ಲಿ ಉನ್ನತ ಮಟ್ಟದ ಸಲೂನ್‌ಗಳಿವೆ.

ಜನರು ಐಷಾರಾಮಿ ಅನುಭವಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಂತಹ ಹೈ ಫೈ ಏರಿಯಾದಲ್ಲಿ ಉದ್ಯಮಶೀಲ ಕ್ಷೌರಿಕ ರೋಹ್ತಾಸ್ ಸಿಂಗ್ ಅವರು ಕೇವಲ 50 ರೂ.ಗೆ ಹೇರ್ ಕಟ್ ಮಾಡ್ತಾರೆ. ಪಾದಚಾರಿ ಮಾರ್ಗದಲ್ಲಿ ಪುಟ್ಟ ಕಚ್ಚಾ ಅಂಗಡಿಯನ್ನು ಹೊಂದಿರುವ ಇವರು ಕೇವಲ 50 ರೂ.ಗೆ ಸೇವೆ ನೀಡುತ್ತಾರೆ.

ಟೋನಿ & ಗೈ ಮತ್ತು ಟ್ರೂಫಿಟ್ ಮತ್ತು ಹಿಲ್‌ನಂತಹ ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಗಳು ಗಣನೀಯವಾಗಿ ಹೆಚ್ಚಿನ ಬೆಲೆಗಳನ್ನು ಪಡೆಯುವ ಮಾರುಕಟ್ಟೆಯಲ್ಲಿ ರೋಹ್ತಾಸ್ ಸಿಂಗ್ ಕಾರ್ಯನಿರ್ವಹಿಸುತ್ತಾರೆ.

ಶುಭೋ ಸೆಂಗುಪ್ತ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು ಸ್ಥಳೀಯ ಆರ್ಥಿಕತೆಗೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುವ ರೋಹ್ತಾಸ್ ಸಿಂಗ್ ರಂತಹ ಸಣ್ಣ ಉದ್ಯಮಿಗಳನ್ನು ಬೆಂಬಲಿಸುವಂತೆ ಕೋರಿದ್ದಾರೆ. ರೋಹ್ತಾಸ್ ಸಿಂಗ್ ಅವರ ಸೇವೆಯ ಗುಣಮಟ್ಟವನ್ನು ಶ್ಲಾಘಿಸಿದ ಸೇನ್‌ಗುಪ್ತಾ ಅವರು ಹತ್ತಿರದ ಪ್ರದೇಶಗಳಲ್ಲಿರುವವರ ಮನೆಗೂ ಭೇಟಿ ನೀಡಿ ರೋಹ್ತಾನ್ ಸಿಂಗ್ ಹೇರ್ ಕಟಿಂಗ್ ಸೇವೆಯನ್ನು ನೀಡುತ್ತಾರೆ ಎಂದು ಮಾಹಿತಿ ನೀಡಿದ್ದು ಸಿಂಗ್ ರವರ ಫೋನ್ ನಂಬರನ್ನೂ ಸಹ ಹಂಚಿಕೊಂಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read