Viral Video |‌ ಈ ಮಾತನ್ನಾಡಿದ್ದಾರೆ ʼಸಮೋಸಾʼ ಪ್ರಿಯ ಅಮೆರಿಕನ್

ಸಮೋಸಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಅಮೆರಿಕದಲ್ಲಿ ಭಾರತೀಯ ಖಾದ್ಯಗಳು ಈಗ ಎಲ್ಲ ಕಡೆ ಸಿಗುತ್ತವೆ. ಭಾರತೀಯ ರೆಸ್ಟೋರೆಂಟ್‌ಗಳು ಅಮೆರಿಕದ ಪ್ರತಿ ನಗರದಲ್ಲಿಯೂ ಇವೆ.

ಆದರೆ ಅಲ್ಲಿ ಹೋಗಿ ಭಾರತೀಯ ಖಾದ್ಯಗಳನ್ನು ತಿನ್ನಲು ಭಾರೀ ಮೊತ್ತ ಪಾವತಿ ಮಾಡಬೇಕು. ಇದೇ ವಿಚಾರವಾಗಿ ವಿಡಿಯೋ ಮಾಡಿರುವ ಭಾರತ ಪ್ರಿಯ ಅಮೆರಿಕನ್ ಯೂಟ್ಯೂಬರ್‌ ’ಇಂಡಿಯಾಡ್ರಿವ್‌’ ರೆಸ್ಟೋರೆಂಟ್‌ ಒಂದರಲ್ಲಿ ಎರಡು ಸಮೋಸಾಗೆ $7.49 ಬೆಲೆ ಇರುವುದನ್ನು ತೋರಿಸಿದ್ದಾರೆ.

“ಭಾರತದಲ್ಲಿ 20 ರೂಪಾಯಿಗೆ ಎರಡು ಸಮೋಸಾ ಸಿಗುತ್ತವೆ. ಅಮೆರಿಕದಲ್ಲಿ ಎರಡು ಸಮೋಸಾಗೆ 600 ರೂ.ಗಿಂತ ಜಾಸ್ತಿ ಕೊಡಬೇಕು,” ಎಂದು ರೆಸ್ಟೋರೆಂಟ್ ಮೆನು ತೋರಿಸುತ್ತಾ ಹೇಳುವ ಈತ ಕೊನೆಯಲ್ಲಿ, “ಅಣ್ಣಾ ನಡೀರೀ ವಾಪಸ್ ಬಿಹಾರಕ್ಕೆ ಹೋಗೋಣ,” ಎಂದು ಬಿಹಾರಿ ಡೈಲೆಕ್ಟ್‌ನಲ್ಲಿ ಹೇಳುತ್ತಿರುವುದು ದೇಸೀ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

“ಈತ ಭಾರತೀಯನಲ್ಲದೇ ಇದ್ದರೂ, ನಮ್ಮಂತೆಯೇ ಡಾಲರನ್ನು ರೂಪಾಯಿಗೆ ಪರಿವರ್ತಿಸಿ ನೋಡುತ್ತಿದ್ದಾನೆ,” ಎಂದು ನೆಟ್ಟಿಗರೊಬ್ಬರು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read