ಬೇಟಾ ಪದ ಅಸಭ್ಯ ಅಂತಾ ಅಂದುಕೊಂಡಿದ್ದರಂತೆ ಅಮೆರಿಕದ ದಾದಿ; ನಿಜ ವಿಚಾರ ತಿಳಿದು ನಕ್ಕು ನಕ್ಕು ಸುಸ್ತಾದ ನರ್ಸ್

ಅಮೆರಿಕದ ದಾದಿಯೊಬ್ಬರು ಹಿಂದಿ ಭಾಷೆಯ ಬೇಟಾ (ಮಗು) ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ನರ್ಸ್ ಒಬ್ಬರು ಭಾರತೀಯ ಕುಟುಂಬಕ್ಕೆ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆ ಕುಟುಂಬ ತಮ್ಮ ಮಗುವನ್ನು ಬೇಟಾ ಎಂದು ಕರೆದಿದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಇದನ್ನು ಗ್ರೀಕ್ ವರ್ಣಮಾಲೆಯ ಎರಡನೇ ಅಕ್ಷರದಂತೆ ಉಚ್ಚರಿಸಲಾಗುತ್ತದೆ. ಹೀಗಾಗಿ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದರಂತೆ. ಇವರ್ಯಾಕೆ ಇಷ್ಟು ಕಠೋರವಾಗಿ ತಮ್ಮ ಮಗುವನ್ನು ಬೇಟಾ ಎಂದು ಕರೆಯುತ್ತಾರೆ ಎಂದು ಅಚ್ಚರಿಗೊಂಡಿದ್ದಾರಂತೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಚಿಕಾಗೋ ಮೂಲದ ಅನಿಪ್ ಪಟೇಲ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ಪದವನ್ನು ಅಸಭ್ಯ ಎಂದೇ ಅಂದುಕೊಂಡಿದ್ದರು. ಆ ಬಳಿಕ ಮಗುವಿನ ತಾಯಿಯೊಂದಿಗೆ ಕೇಳಿದಾಗ ದಾದಿಗೆ ಸತ್ಯ ತಿಳಿದು ನಗು ಬಂದಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋವನ್ನು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

https://youtu.be/gm2wTh1hyBM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read