ಕಮರ್ಷಿಯಲ್‌ ಪ್ರಾಪರ್ಟಿಯನ್ನು ಭರ್ಜರಿ ಮೊತ್ತಕ್ಕೆ ಬಾಡಿಗೆ ನೀಡಿದ್ದಾರೆ ಈ ನಟ..…!

ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಹೆಸರು ಕೂಡ ಸೇರಿದೆ. ಸಲ್ಮಾನ್‌ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದೀಗ ಸಲ್ಲು ಪ್ರತಿ ತಿಂಗಳು ಕೋಟಿಗಟ್ಟಲೆ ಬಾಡಿಗೆ ಹಣ ಎಣಿಸಲು ಕೂಡ ಸಜ್ಜಾಗಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿರುವ ತಮ್ಮ ಕಮರ್ಷಿಯಲ್‌ ಪ್ರಾಪರ್ಟಿಯೊಂದನ್ನು 60 ತಿಂಗಳುಗಳ ಕಾಲ ಬಾಡಿಗೆಗೆ ನೀಡಿದ್ದಾರೆ. ಸಲ್ಮಾನ್ ಖಾನ್ ರಿಟೇಲ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಆಸ್ತಿ ಇದು. ಈ ಪ್ರಾಪರ್ಟಿ ಒಟ್ಟು 2,140.71 ಚದರ ಮೀಟರ್ ಪ್ರದೇಶದಲ್ಲಿದೆ.

ಇಲ್ಲಿ ಹಣ್ಣು, ತರಕಾರಿ, ದಿನಬಳಕೆ ಪದಾರ್ಥಗಳ ದೊಡ್ಡ ಮಳಿಗೆ ಪ್ರಾರಂಭವಾಗಲಿದೆ. ಗುತ್ತಿಗೆಗೆ ನೀಡಲಾದ ಪ್ರಾಪರ್ಟಿಯಲ್ಲಿ ಎರಡು ಮಹಡಿಗಳಿವೆ. ಇದರ ತಿಂಗಳ ಬಾಡಿಗೆ ಸುಮಾರು 1 ಕೋಟಿ ರೂಪಾಯಿ.

ಈಗಾಗ್ಲೇ ಸಲ್ಮಾನ್‌ ಖಾನ್‌ ಮುಂಗಡ 5.40 ಕೋಟಿ ರೂಪಾಯಿ ಪಡೆದಿದ್ದಾರಂತೆ. ವರದಿಗಳ ಪ್ರಕಾರ ಸಲ್ಮಾನ್ ಖಾನ್ ಮತ್ತು ಕಂಪನಿಯ ನಡುವೆ ಆಗಸ್ಟ್ 2, 2023 ರಂದು ಒಪ್ಪಂದವಾಗಿದೆ. ಇದಕ್ಕೂ ಮುನ್ನ ರಣಬೀರ್ ಕಪೂರ್ ಪುಣೆಯ ಟ್ರಂಪ್ ಟವರ್‌ನಲ್ಲಿರುವ ಐಷಾರಾಮಿ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಇದರ ಬಾಡಿಗೆ ತಿಂಗಳಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ಇತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read