ಹುಟ್ಟುಹಬ್ಬದಂದು ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ʼಶುಭ ಫಲʼ

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು ಹೇಗಿದ್ದರೆ ಶುಭ ಫಲಗಳು ನಮ್ಮದಾಗುತ್ತವೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಹುಟ್ಟುಹಬ್ಬದಂದು ಕೂದಲು ಹಾಗೂ ಉಗುರನ್ನು ಕತ್ತರಿಸಬಾರದು. ಇದು ಅಪಶಕುನವೆಂದು ನಂಬಲಾಗಿದೆ. ಜನ್ಮದಿನಕ್ಕಿಂತ ಒಂದು ದಿನ ಮೊದಲು ಈ ಎಲ್ಲ ಕೆಲಸ ಮಾಡಬೇಕು.

ಹುಟ್ಟುಹಬ್ಬದಂದು ಮಂಗಳಮುಖಿಗೆ ಬಳೆ ಹಾಗೂ ಹಣವನ್ನು ದಾನ ಮಾಡಬೇಕು. ಮಂಗಳಮುಖಿಯರ ಆಶೀರ್ವಾದ ಪಡೆದ್ರೆ ಒಳ್ಳೆಯದಾಗಲಿದೆ.

ಬೆಳ್ಳಿ ಪಾತ್ರೆಯಲ್ಲಿ ಹಾಲು, ಗಂಗಾ ಜಲವನ್ನು ಹಾಕಿ ಶಿವಲಿಂಗಕ್ಕೆ ಅರ್ಪಿಸಬೇಕು. 11 ಅಥವಾ 21 ಬಿಲ್ವ ಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಿ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಬೇಕು. ಹುಟ್ಟು ಹಬ್ಬದ ದಿನ ಶಿವನ ದೇವಸ್ಥಾನಕ್ಕೆ ಅವಶ್ಯವಾಗಿ ಹೋಗಿ.

ಹುಟ್ಟುಹಬ್ಬದಂದು ಯಾವುದೇ ಪ್ರಾಣಿಯ ಹತ್ಯೆ ಮಾಡಬಾರದು. ಈ ದಿನ ಮಾಂಸಹಾರ ಸೇವನೆ ಮಾಡಬಾರದು.

ಯಾವುದೇ ಸಾಧು ಅಥವಾ ಬಡವರಿಗೆ ಅವಮಾನ ಮಾಡಬಾರದು. ಕೈಲಾದಷ್ಟು ದಾನ ಮಾಡಬೇಕು.

ಸ್ನಾನದ ನೀರಿಗೆ ಗಂಗಾ ಜಲವನ್ನು ಹಾಕಬೇಕು. ಹೀಗೆ ಮಾಡಿದಲ್ಲಿ ತೀರ್ಥ ಸ್ನಾನದ ಫಲ ಪ್ರಾಪ್ತಿಯಾಗುತ್ತದೆ.

ಹನುಮಂತನಿಗೆ ತುಪ್ಪದ ದೀಪ ಹಚ್ಚಿ. ‘ಓಂ ರಾಮದೂತಾಯ ನಮಃ’ ಮಂತ್ರವನ್ನು ಜಪಿಸಿ.

ಸೌಭಾಗ್ಯವತಿಗೆ ಮಂಗಳಕರ ವಸ್ತುಗಳನ್ನು ದಾನ ಮಾಡಿ.

ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗಿಲ್ಲವೆಂದಾದ್ರೆ ದಾರಿ ಮಧ್ಯೆ ಕಾಣುವ ದೇವರ ಪ್ರತಿಮೆಗೆ ಪೂಜೆ ಮಾಡಿ.

ದೊಡ್ಡವರ ಹಾಗೂ ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read