ʼಯೋಗʼ ಪ್ರಾರಂಭಿಸುವ ಮೊದಲು ನಿಮಗಿದು ತಿಳಿದಿರಲಿ

ಆರೋಗ್ಯಕರ ಜೀವನ ನಡೆಸುವ ಕಲೆ ಯೋಗ. ಯೋಗ, ದೇಹದ ಎಲ್ಲ ರೀತಿಯ ರೋಗಗಳಿಗೆ ಮೊದಲೇ ಚಿಕಿತ್ಸೆ ನೀಡುತ್ತದೆ.

ಯೋಗ ದೇಹ ಹಾಗೂ ಮನಸ್ಸಿನಲ್ಲಿರುವ ಅಸ್ವಸ್ಥತೆಯನ್ನು ತೊಡೆದು ಹಾಕುತ್ತದೆ. ಮಾನವನ ಶುದ್ಧೀಕರಣಕ್ಕೆ ಇದು ಸುಲಭ ಸಾಧನ. ಯೋಗ ಐದು ಸಾವಿರ ವರ್ಷ ಹಳೆಯದು. ದೇಹವನ್ನು ಆರೋಗ್ಯಕರವಾಗಿಡಲು ಬಳಸುವ ಎಲ್ಲ ತಂತ್ರಗಳಿಗಿಂತ ಯೋಗ ಭಿನ್ನವಾಗಿದೆ. ಇದನ್ನು ಅಧ್ಯಯನ ಮಾಡುವ ಮೊದಲು ನಾವು ಯೋಗದ ಬಗ್ಗೆ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಯೋಗ ಮಾಡಲು ಮುಖ್ಯವಾಗಿ ಫ್ರೀಯಾಗಿರುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಬೆಳಗಿನ ಸಮಯ ಯೋಗಕ್ಕೆ ಉತ್ತಮ. ಆದ್ರೆ ವಾರದ 7 ದಿನ ಯಾವ ಸಮಯದಲ್ಲಿ ನೀವು ಫ್ರೀ ಇರುತ್ತೀರಿ ಎಂಬುದನ್ನು ನೋಡಿ ಸಮಯ ಆಯ್ಕೆ ಮಾಡಿಕೊಳ್ಳಿ. ದಿನಕ್ಕೊಂದು ಸಮಯದಲ್ಲಿ ಯೋಗ ಮಾಡುವುದು ಸೂಕ್ತವಲ್ಲ.

ಯೋಗ ಮಾಡಲು ಸ್ವಚ್ಛ ಹಾಗೂ ಶಾಂತ ವಾತಾವರಣದ ಅಗತ್ಯವಿರುತ್ತದೆ. ಶುದ್ಧ ಗಾಳಿ ಬೀಸುವ ಜಾಗ ಯೋಗಕ್ಕೆ ಅತ್ಯುತ್ತಮ. ಹಾಗಾಗಿ ಯೋಗ ಮಾಡುವ ಮೊದಲು ಜಾಗದ ಬಗ್ಗೆ ಗಮನ ನೀಡಿ.

ಯೋಗವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವುದು ಲಾಭದಾಯಕ. ಇದು ಸಾಧ್ಯವಾಗಿಲ್ಲವೆಂದಾದ್ರೆ ಭೋಜನ ಹಾಗೂ ಯೋಗದ ಮಧ್ಯೆ ಕನಿಷ್ಠ 3 ಗಂಟೆ ಅಂತರವಿರುವಂತೆ ನೋಡಿಕೊಳ್ಳಿ. ಭೋಜನವಾದ ತಕ್ಷಣ ನೀವು ವಜ್ರಾಸನವೊಂದನ್ನು ಮಾಡಬಹುದು.

ಯೋಗದ ವೇಳೆ ಬಿಗಿಯಾಗಿರುವ ಬಟ್ಟೆಯನ್ನು ಧರಿಸಬೇಡಿ. ಆಸನ ಮಾಡುವ ವೇಳೆ ಬಟ್ಟೆ ಹರಿಯುವ ಸಾಧ್ಯತೆಯಿರುತ್ತದೆ. ಜೊತೆಗೆ ಸರಳವಾಗಿ ಆಸನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಯೋಗ ಮಾಡುವ ವೇಳೆ ಏಕಾಗ್ರತೆ ಅಗತ್ಯ. ಮೊಬೈಲ್ ಬಳಕೆ ಅಥವಾ ಬೇರೆಯವರ ಜೊತೆ ಮಾತು ಬೇಡ.

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಯೋಗ ಮಾಡದಿರುವುದು ಒಳ್ಳೆಯದು. ಕೆಲವರಿಗೆ ರಕ್ತಸ್ರಾವ ಸಂಬಂಧಿ ಕಾಯಿಲೆ ಕಾಡುವ ಸಾಧ್ಯತೆಯಿರುತ್ತದೆ.

ಗರ್ಭಿಣಿಯರು ಯೋಗ ಮಾಡಬಾರದೆಂದು ಸಲಹೆ ನೀಡಲಾಗುತ್ತದೆ. ಅಗತ್ಯವೆನಿಸಿದ್ರೆ ವೈದ್ಯರ ಸಲಹೆ ಪಡೆದು ಯೋಗ ಮಾಡಬಹುದು.

ಯೋಗ ಮಾಡುವಾಗ ಉಸಿರಾಟದ ಬಗ್ಗೆ ಮಹತ್ವ ನೀಡಬೇಕಾಗುತ್ತದೆ. ಯಾವ ಭಂಗಿಯಲ್ಲಿ ಉಸಿರು ತೆಗೆದುಕೊಳ್ಳಬೇಕು, ಯಾವ ಭಂಗಿಯಲ್ಲಿ ಬಿಡಬೇಕೆಂಬ ಬಗ್ಗೆ ಜ್ಞಾನವಿರಬೇಕು. ಉಸಿರಾಟದ ಬಗ್ಗೆ ಗಮನವಿದ್ದಲ್ಲಿ ಮಾಡಿದ ಯೋಗ ಫಲ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read