ಕಳ್ಳತನ ಮಾಡಿ ಓಡುತ್ತಿದ್ದವನ ಮೇಲೆ ಹರಿದ ಬಸ್; ವಿಡಿಯೋ ವೈರಲ್…!

ಕಳ್ಳತನ ಮಾಡಿ ಓಡ್ತಿದ್ದ ಹುಡುಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ವೈರಲ್‌ ಆಗಿದೆ. ಓಡ್ತಿದ್ದ ಹುಡುಗ ಬಸ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ ಫೋನ್‌ ಕದ್ದಿದ್ದಾನೆ. ಫೋನ್‌ ಕಿತ್ತುಕೊಂಡು ಓಡುತ್ತಿದ್ದವನು ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬಂದ ಬಸ್‌ ಆತನಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಹುಡುಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆ ಬ್ರೆಜಿಲ್‌ ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಫೋನ್‌ ನಲ್ಲಿ ವೃದ್ಧನೊಬ್ಬ ಮಾತನಾಡ್ತಾ ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಆತನ ಹಿಂದೆ ಓಡಾಡ್ತಿದ್ದ ಹುಡುಗ, ಫೋನ್‌ ಕಸಿದುಕೊಂಡು ಓಡ್ತಾನೆ. ವೃದ್ಧನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಸ್‌ ಕೆಳಗಾಗಿದ್ದಾನೆ.

ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಅನೇಕರು ಕಮೆಂಟ್‌ ಮಾಡಿದ್ದಾರೆ. ಈಗ ಮಾಡಿದ ತಪ್ಪಿಗೆ ಈಗ್ಲೇ ಶಿಕ್ಷೆ ಸಿಕ್ಕಿದೆ ಎಂದು ಕೆಲವರು ಹೇಳಿದ್ದಾರೆ. ಕಳ್ಳ, ಫೋನ್‌ ಸಿಕ್ಕ ಖುಷಿಯಲ್ಲಿ ಸುರಕ್ಷತಾ ನಿಯಮ ಪಾಲಿಸದ ಕಾರಣ ಈ ಘಟನೆ ನಡೆದಿದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

https://twitter.com/CollinRugg/status/1814758496514289800?ref_src=twsrc%5Etfw%7Ctwcamp%5Etweetembed%7Ctwterm%5E1814758496514289800%7Ctwgr%5Eb18973cb4e9bf3b26dd9ed9aad4987d6a103f18b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews24online-epaper-dh6e93c67437a349d2840ea9f3d985b655%2Fcaughtoncamerathiefsnatchesphonediesinbuscollisionwatchtheviralfootage-newsid-n623042694

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read