ಕಳ್ಳತನ ಮಾಡುವಾಗ ಸುಸ್ತಾಗಿ ನಿದ್ರೆಗೆ ಜಾರಿದ ಚೋರ; ಎಚ್ಚರವಾದಾಗ ಸುತ್ತಲೂ ಪೊಲೀಸರನ್ನು ಕಂಡು ಶಾಕ್…!

ಉತ್ತರ ಪ್ರದೇಶದ ಲಕ್ನೋದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಕಳ್ಳತನ ಮಾಡುವ ಸಲುವಾಗಿ ವೈದ್ಯರ ಮನೆಗೆ ನುಗ್ಗಿದ್ದ ಕಳ್ಳ ಕೃತ್ಯ ಎಸಗುವಾಗ ಸುಸ್ತಾಗಿ ನಿದ್ರೆಗೆ ಜಾರಿದ್ದು, ಎಚ್ಚರವಾದಾಗ ಸುತ್ತಲೂ ನಿಂತಿದ್ದ ಪೊಲೀಸರನ್ನು ಕಂಡು ಶಾಕ್ ಆಗಿದ್ದಾನೆ.

ಪ್ರಕರಣದ ವಿವರ: ಲಕ್ನೋದ ಇಂದಿರಾ ನಗರ ಸೆಕ್ಟರ್ 20ರಲ್ಲಿ ಸುನಿಲ್ ಪಾಂಡೆ ಎಂಬ ವೈದ್ಯರ ಮನೆಯಿದ್ದು, ಕೆಲ ದಿನಗಳಿಂದ ಅವರು ವಾರಣಾಸಿಗೆ ತೆರಳಿದ್ದ ಕಾರಣ ಯಾರೂ ಇರಲಿಲ್ಲ. ಇದನ್ನು ಗಮನಿಸಿದ್ದ ಕಳ್ಳ ರಾತ್ರಿ ವೇಳೆ ಮನೆ ಪ್ರವೇಶಿಸಿದ್ದಾನೆ. ಅಲ್ಲಿದ್ದ ವಾಷ್ ಬೇಸಿನ್ ಸೇರಿದಂತೆ ಎಲ್ಲವನ್ನು ಕಳವು ಮಾಡಲು ಯತ್ನಿಸಿದ್ದಾನೆ.

ಅವುಗಳನ್ನು ಕೀಳಲು ಯತ್ನಿಸಿದ ಪರಿಣಾಮ ಸುಸ್ತಾಗಿದ್ದು ಸ್ವಲ್ಪ ವಿಶ್ರಾಂತಿ ಪಡೆಯಲೆಂದು ಮಲಗಿದವನು ಹಾಗೆಯೇ ಗಾಢ ನಿದ್ರೆಗೆ ಜಾರಿದ್ದಾನೆ. ಬೆಳಗಿನ ಜಾವ ಅಕ್ಕಪಕ್ಕದವರು ಎದ್ದ ವೇಳೆ ವೈದ್ಯರ ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.

ಕೂಡಲೇ ಸ್ಥಳಕ್ಕೆ ಭಾವಿಸಿದ ಪೊಲೀಸರಿಗೆ ಗಾಢ ನಿದ್ರೆಯಲ್ಲಿದ್ದ ಕಳ್ಳ ಕಂಡು ಬಂದಿದ್ದು, ಆತನು ಸಹ ಸದ್ದಿನಿಂದ ಎಚ್ಚರಗೊಂಡು ಸುತ್ತಲೂ ನಿಂತಿದ್ದ ಪೊಲೀಸರನ್ನು ನೋಡಿ ಗಾಬರಿಗೊಂಡಿದ್ದಾನೆ. ಬೇಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read