ಪುರುಷರ ಲೈಂಗಿಕ ಬಯಕೆ ಹೆಚ್ಚಿಸಲು ಸಹಕಾರಿ ಈ ತರಕಾರಿ

ಸಂಬಂಧದಲ್ಲಿ ಲೈಂಗಿಕ ಜೀವನ ಉತ್ತಮವಾಗಿದ್ದರೆ ಮಾತ್ರ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಆದರೆ ಕೆಲವು ಪುರುಷರಿಗೆ ತಮ್ಮ ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ತಮ್ಮ ಲೈಂಗಿಕ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಅವರು ಈ ತರಕಾರಿಗಳನ್ನು ಸೇವಿಸಬಹುದು.

ಕ್ಯಾರೆಟ್ : ಇದರಲ್ಲಿ ವಿಟಮಿನ್ ಎ ಅಧಿಕವಾಗಿದೆ. ಈ ವಿಟಮಿನ್ ಎ ನಿಮ್ಮ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮತ್ತು ಇದು ಪುರುಷರಲ್ಲಿ ವೀರ್ಯದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಬಂಜೆತನದ ಸಮಸ್ಯೆ ಕಾಡುವುದಿಲ್ಲ.

ಬೆಳ್ಳುಳ್ಳಿ : ಇದು ಕಾಮೋತ್ತೇಜಕ ಆಹಾರವಾಗಿದೆ. ಇದರಲ್ಲಿ ಅಲಿಸಿನ್ ಅಂಶವಿದ್ದು, ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಮತ್ತು ಜನನಾಂಗದ ಪ್ರದೇಶದಲ್ಲಿನ ರಕ್ತನಾಳಗಳನ್ನು ವಿಸ್ತರಿಸುತ್ತದೆ. ಇದರಿಂದ ನಿಮ್ಮ ಲೈಂಗಿಕ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಈರುಳ್ಳಿ : ಇದು ಕೂಡ ನಿಮ್ಮ ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಲೈಂಗಿಕ ಅಂಗಗಳನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ.

ಟೊಮೆಟೊ : ಇದರಲ್ಲಿ ಲೈಕೋಪೀನ್ ಇದ್ದು, ಇದು ಟೊಮೆಟೊಗೆ ಕೆಂಪು ಬಣ್ಣವನ್ನು ನೀಡುವುದು ಮಾತ್ರವಲ್ಲ ಪುರುಷರಲ್ಲಿ ನಿಮಿರುವಿಕೆಯನ್ನು ಬಲಗೊಳ್ಳಿಸುತ್ತದೆಯಂತೆ ಮತ್ತು ಇದು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read