ಈ ಥರದ ಹುಡುಗಿಯರಿಗೆ ಫಿದಾ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು ಮುದ್ದಾದ ವ್ಯಕ್ತಿತ್ವ ಹುಡುಗ್ರನ್ನು ಸೆಳೆಯುತ್ತದೆ.

ರೋಮ್ಯಾನ್ಸ್ ವೇಳೆ ಸೇರಿದಂತೆ ಕೆಲ ಸಂದರ್ಭದಲ್ಲಿ ಹುಡುಗಿಯರು ನಾಚಿಕೊಳ್ಳುವ ಸಂಗತಿ ಹುಡುಗ್ರನ್ನು ಸೆಳೆಯುತ್ತದೆ. ಹುಡುಗಿ ನಾಚಿಕೊಂಡ್ರೆ ಹುಡುಗ ಪ್ರೀತಿಯ ಹೊಂಡಕ್ಕೆ ಬಿದ್ದ ಎಂದೇ ಅರ್ಥ.

ಹುಡುಗರಿಗೆ ಹೋಲಿಸಿದ್ರೆ ಹುಡುಗಿಯರು ಹೆಚ್ಚು ಕಾಳಜಿ ಮಾಡ್ತಾರೆ. ಹುಡುಗ್ರನ್ನು ಆಗಾಗ ಪ್ರಶ್ನೆ ಮಾಡ್ತಿರುತ್ತಾರೆ. ಊಟ ಆಯ್ತಾ? ಆರೋಗ್ಯ ಹೇಗಿದೆ? ಹೀಗೆ ಅವ್ರ ಬಗ್ಗೆ ಕಾಳಜಿ ತೋರೋದು ಹುಡುಗರಿಗೆ ಇಷ್ಟವಾಗುತ್ತದೆ.

ಹುಡುಗಿಯರ ಕೂದಲನ್ನು ಇಷ್ಟಪಡುವ ಹುಡುಗ್ರ ಸಂಖ್ಯೆಯೂ ಕಡಿಮೆಯೇನಿಲ್ಲ. ಮಾತನಾಡುವಾಗ ಕೂದಲನ್ನು ಸರಿ ಮಾಡಿಕೊಳ್ಳುವ ಅಥವಾ ಕೂದಲ ಜೊತೆ ಆಟವಾಡುವ ಹುಡುಗಿ, ಹುಡುಗನಿಗೆ ಇಷ್ಟವಾಗ್ತಾಳೆ.

ಪ್ರತಿಯೊಂದು ಮಾತಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು, ಪ್ರೀತಿಯ ಮಾತನಾಡುವ ಹುಡುಗಿಯರು ಹುಡುಗರನ್ನು ಸೆಳೆಯುತ್ತಾರೆ.

ಹುಡುಗಿಯರು ತುಂಬಾ ಭಾವನಾತ್ಮಕವಾಗಿದ್ದಾಗ ಇಲ್ಲ ರೋಮ್ಯಾಂಟಿಕ್ ಮೂಡಿನಲ್ಲಿದ್ದಾಗ ಹುಡುಗ್ರನ್ನು ತಬ್ಬಿಕೊಳ್ತಾರೆ. ಇದು ಹುಡುಗರಿಗೆ ಇಷ್ಟ.

ಯಾವುದೇ ಹಿಂಜರಿಕೆಯಿಲ್ಲದೆ ನೇರವಾಗಿ ಮಾತನಾಡುವ ಹುಡುಗಿಯರು ಕೂಡ ಅನೇಕ ಹುಡುಗರಿಗೆ ಇಷ್ಟವಾಗ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read