BIG NEWS: ರೈಲ್ವೆಯ 2 ಸಾರ್ವಜನಿಕ ಉದ್ಯಮಗಳಿಗೆ ‘ನವರತ್ನ ಸ್ಥಾನಮಾನ’

ನವದೆಹಲಿ: ಸರ್ಕಾರವು ಎರಡು ರೈಲ್ವೆ ಪಿಎಸ್‌ಯುಗಳನ್ನು(ಸಾರ್ವಜನಿಕ ವಲಯದ ಉದ್ಯಮಗಳು) ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ಮತ್ತು ಭಾರತೀಯ ರೈಲ್ವೆ ಹಣಕಾಸು ನಿಗಮ (IRFC) ಮೇಲ್ದರ್ಜೆಗೇರಿಸಲ್ಪಟ್ಟ ಪಿಎಸ್‌ಯುಗಳಾಗಿವೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ರೈಲ್ವೆ ಸಚಿವಾಲಯದ ಒಂದು CPSE ಆಗಿದ್ದು, ವಾರ್ಷಿಕ ವಹಿವಾಟು 4,270.18 ಕೋಟಿ ರೂ., ತೆರಿಗೆ ನಂತರದ ಲಾಭ ರೂ. 1,111.26 ಕೋಟಿ ರೂ. ಮತ್ತು 2023-24ನೇ ಹಣಕಾಸು ವರ್ಷದಲ್ಲಿ 3,229.97 ಕೋಟಿ ರೂ.ನಿವ್ವಳ ಮೌಲ್ಯವನ್ನು ಹೊಂದಿದೆ.

IRFC(ಭಾರತೀಯ ರೈಲ್ವೆ ಹಣಕಾಸು ನಿಗಮ) ರೈಲ್ವೆ ಸಚಿವಾಲಯದ ಒಂದು CPSE ಆಗಿದ್ದು, ವಾರ್ಷಿಕ ವಹಿವಾಟು 26,644 ಕೋಟಿ ರೂ., PAT 6,412 ಕೋಟಿ ರೂ. ಮತ್ತು 2023-24ನೇ ಹಣಕಾಸು ವರ್ಷದಲ್ಲಿ 49,178 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದೆ ಎಂದು ಹೇಳಿದೆ.

ಈ ಬೆಳವಣಿಗೆಗೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಎರಡೂ PSU ಗಳ ತಂಡಗಳನ್ನು ಅಭಿನಂದಿಸಿದ್ದಾರೆ. “ನವರತ್ನ ಸ್ಥಾನಮಾನಕ್ಕೆ ಅಪ್‌ಗ್ರೇಡ್ ಮಾಡಲಾದ ಐಆರ್‌ಸಿಟಿಸಿ ತಂಡ ಮತ್ತು ಐಆರ್‌ಎಫ್‌ಸಿ ತಂಡಕ್ಕೆ ಅಭಿನಂದನೆಗಳು” ಎಂದು ಮಾಡಿದ್ದಾರೆ.

ಐಆರ್‌ಸಿಟಿಸಿ ಷೇರುಗಳು ಇಂದಿನ ವಹಿವಾಟನ್ನು ಶೇ. 0.75 ರಷ್ಟು ಲಾಭದೊಂದಿಗೆ ಕೊನೆಗೊಳಿಸಿದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read