‘ವಿಟಮಿನ್ ಡಿ’ ಕೊರತೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು, ನಿರ್ಲಕ್ಷಿಸಿದ್ರೆ ಅಪಾಯ ನಿಶ್ಚಿತ…..!

ಕೆಲಸದ ಒತ್ತಡದಲ್ಲಿ ಜನರು ತಮ್ಮ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ಸೇವಿಸುವ ಆಹಾರದ ಬಗ್ಗೆ ಗಮನಹರಿಸುವುದೇ ಇಲ್ಲ. ಇದರಿಂದ ದೇಹದಲ್ಲಿ ಅನೇಕ ಪೋಷಕಾಂಶಗಳ ಕೊರತೆಯಾಗುತ್ತದೆ. ವಿಟಮಿನ್ ಡಿ ಕೊರತೆಯಂತೂ ಸರ್ವೇ ಸಾಮಾನ್ಯ. ವಿಟಮಿನ್‌ ಡಿ ಕೊರತೆಯಿಂದಾಗಿ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ. ಈ ಬದಲಾವಣೆಗಳನ್ನು ಗುರುತಿಸಿ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ನೀವು ತುಂಬಾ ಒತ್ತಡವನ್ನು ಅನುಭವಿಸುತ್ತೀರಿ. ವಿಟಮಿನ್ ಡಿ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಕೂದಲು ತುಂಬಾ ದುರ್ಬಲವಾಗುತ್ತದೆ ಮತ್ತು ಎಷ್ಟೇ ಪ್ರಯತ್ನಪಟ್ಟರೂ ಕೂದಲು ಉದುರುವಿಕೆ ನಿಲ್ಲುವುದಿಲ್ಲ.

ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ಆಗಾಗ ಕಾಲುಗಳಲ್ಲಿ ನೋವು ಕಾಡಬಹುದು. ಏಕೆಂದರೆ ಮೂಳೆಗಳು ಆರೋಗ್ಯಕರವಾಗಿರಲು ದೇಹದಲ್ಲಿ ವಿಟಮಿನ್ ಡಿ ಇರುವುದು ಬಹಳ ಮುಖ್ಯ.

ಒಮ್ಮೊಮ್ಮೆ ಕೆಲಸ ಮಾಡದೇ ಇದ್ದರೂ ವಿಪರೀತ ಆಯಾಸವಾಗುತ್ತದೆ. ವಿಟಮಿನ್ ಡಿ ಕೊರತೆ ಕೂಡ ಇದಕ್ಕೆ ಕಾರಣ. ಸಾಕಷ್ಟು ನಿದ್ರೆ ಮಾಡಿದ ನಂತರವೂ ಇಡೀ ದಿನ ಸೋಮಾರಿತನ ಉಂಟಾದರೆ ವಿಟಮಿನ್ ಡಿ ಕೊರತೆ ಇರುವ ಸಾಧ್ಯತೆಯಿದೆ. ಸ್ನಾಯುಗಳ ದೌರ್ಬಲ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read