2024ರಲ್ಲಿ ಗಲ್ಲಾಪೆಟ್ಟಿಗೆ ದೋಚಲಿವೆ ಈ ಚಿತ್ರಗಳು, ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಭರಪೂರ ಮನರಂಜನೆ…!

2023 ಇನ್ನೇನು ಮುಗಿದೇ ಹೋಯ್ತು. ಹೊಸವರ್ಷಕ್ಕಾಗಿ ಎಲ್ಲರೂ ಕಾತರದಿಂದಿದ್ದಾರೆ. 2024ರ ಹೊಸ ವರ್ಷ ಸಿನಿಪ್ರಿಯರಿಗೆ ಬಂಪರ್‌ ಮನರಂಜನೆಯನ್ನೇ ಉಣಬಡಿಸುವ ನಿರೀಕ್ಷೆಯಿದೆ. ಯಾಕಂದ್ರೆ 2024ರಲ್ಲಿ ಬಹುನಿರೀಕ್ಷಿತ ಥ್ರಿಲ್ಲರ್ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ.

ಯೋಧಾ: ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಯೋಧಾ ಚಿತ್ರ ಈಗಾಗ್ಲೇ ಸುದ್ದಿಯಲ್ಲಿದೆ. 2023ರ ಡಿಸೆಂಬರ್‌ನಲ್ಲೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ರಿಲೀಸ್‌ ಡೇಟ್‌ ಮಾರ್ಚ್ 15, 2024ಕ್ಕೆ ನಿಗದಿಯಾಗಿದೆ. ಶೇರ್‌ಷಾ ಚಿತ್ರದ ಬಳಿಕ ಸಿದ್ಧಾರ್ಥ್ ಮಲ್ಹೋತ್ರಾ ಮತ್ತೊಮ್ಮೆ ಸ್ಟ್ರಾಂಗ್‌ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ಕೂಡ ನಟಿಸಿದ್ದಾರೆ.

ದೇವರ: ಇದೊಂದು ದಕ್ಷಿಣದ ಸಿನೆಮಾ. ಈಗಾಗ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ತಾರಾಬಳಗದ ಫಸ್ಟ್ ಲುಕ್ ಮಾತ್ರ ರಿವೀಲ್ ಆಗಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಜಾನ್ವಿ ಕಪೂರ್ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಉಲಜ್: ಉಲಜ್‌ ಚಿತ್ರದಲ್ಲಿ ಜಾನ್ವಿ ಕಪೂರ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಈಗಾಗ್ಲೇ ಮುಕ್ತಾಯವಾಗಿದೆ. ಗುಲ್ಷನ್ ದೇವಯ್ಯ, ರೋಷನ್ ಮ್ಯಾಥ್ಯೂ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್‌ ಕಥಾಹಂದರವನ್ನು ಹೊಂದಿರುವ ಸಿನೆಮಾ.

ಮೆರ್ರಿ ಕ್ರಿಸ್ಮಸ್: ಮೆರ್ರಿ ಕ್ರಿಸ್ಮಸ್ 2024ರ ಬಹು ನಿರೀಕ್ಷಿತ ಚಿತ್ರ. ಇದರಲ್ಲಿ ಕತ್ರೀನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸೌತ್ ಸ್ಟಾರ್ ವಿಜಯ್ ಸೇತುಪತಿ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವು ಜನವರಿ 12 ರಂದು ಬಿಡುಗಡೆಯಾಗಲಿದೆ. ಇದು ಕೂಡ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ ಇರುವ ಚಿತ್ರ.

ಆಪರೇಷನ್ ವ್ಯಾಲೆಂಟೈನ್: ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ ಪ್ರೇಕ್ಷಕರಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಫೆಬ್ರವರಿ 16ಕ್ಕೆ ಆಪರೇಷನ್‌ ವ್ಯಾಲಂಟೈನ್‌ ತೆರೆಗೆ ಬರಲಿದೆ. ವರುಣ್ ತೇಜ್, ಮಾನುಷಿ ಚಿಲ್ಲರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read