ಮುಖದ ಮೇಲಿನ ಕಲೆಗೆ ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಮೇಲೆ ಕೆಲವೊಮ್ಮೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದರೂ ಈ ಕಪ್ಪುಕಲೆಗಳು ನಿವಾರಣೆಯಾಗುವುದಿಲ್ಲ. ಆದರೆ ಈ ಕಲೆಗಳು ನಮ್ಮ ಕೆಲವು ಸಮಸ್ಯೆಗಳಿಂದ ಉಂಟಾಗುತ್ತದೆ. ಅದು ಯಾವುದೆಂಬುದನ್ನು ತಿಳಿದುಕೊಳ್ಳಿ.

* ಚರ್ಮದ ಮೇಲೆ ಹೆಚ್ಚು ನಿಂಬೆ ಹಣ್ಣನ್ನು ಬಳಸುವುದರಿಂದ ಈ ಸಮಸ್ಯೆ ಕಾಡುತ್ತದೆ. ಮುಖಕ್ಕೆ ನಿಂಬೆ ಹಚ್ಚಿದರೆ ಸೂರ್ಯನ ಬಿಸಿಲಿನಿಂದ ದೂರವಿರಬೇಕು. ಇಲ್ಲವಾದರೆ ಇದರಿಂದ ಸಮಸ್ಯೆ ಕಾಡುತ್ತದೆ.

* ಹೊರಗೆ ಹೋಗುವಾಗ ಯುವಿ ಕಿರಣಗಳಿಂದ ಚರ್ಮವನ್ನು ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಬಳಸಬೇಕು. ಇಲ್ಲವಾದರೆ ಸೂರ್ಯನ ಬಿಸಿಲಿಗೆ ಚರ್ಮದಲ್ಲಿ ಸನ್ ಬರ್ನ್ ಆಗಿ ಕಪ್ಪಾಗುತ್ತದೆ.

* ಚರ್ಮದ ಆರೈಕೆಗೆ ಎಕ್ಸ್ ಪೋಲಿಯೇಶನ್ ಅತ್ಯಗತ್ಯ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ ನಿಜ. ಆದರೆ ಇದನ್ನು ಅತಿಯಾಗಿ ಮಾಡಿದರೆ ಮಾತ್ರ ಚರ್ಮದ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಹಾಗಾಗಿ ಇದನ್ನು ವಾರದಲ್ಲಿ 1-2 ಬಾರಿ ಮಾತ್ರ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read