ಲಿವರ್‌ಗೆ ಮಾರಕ ಬೆಳಗ್ಗೆ ನಾವು ಮಾಡುವ ಈ ತಪ್ಪುಗಳು…!

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರ ಜೊತೆಗೆ ಲಿವರ್‌ ರಕ್ತವನ್ನು ಶುದ್ಧೀಕರಿಸುತ್ತದೆ. ದೇಹದ ವಿವಿಧ ಕಾರ್ಯಗಳನ್ನು ಸರಾಗವಾಗಿ ನಡೆಸಲು ಸಹಾಯ ಮಾಡುತ್ತದೆ. ಆದರೆ ನಮ್ಮ ದಿನಚರಿಯಲ್ಲಿ ಮಾಡುವ ಕೆಲವು ತಪ್ಪುಗಳು ಯಕೃತ್ತಿಗೆ ಅಪಾಯಕಾರಿ. ವಿಶೇಷವಾಗಿ ಬೆಳಗಿನ ಕೆಟ್ಟ ಅಭ್ಯಾಸಗಳು ಯಕೃತ್ತಿಗೆ ಹಾನಿ ಮಾಡುತ್ತವೆ. ಯಕೃತ್ತು ಹಾನಿಗೊಳಗಾದರೆ ಸಕ್ಕರೆ ಕಾಯಿಲೆಯಂತಹ ರೋಗಗಳು ಬರಬಹುದು.

ನೀರು ಕುಡಿಯದೆ ದಿನವನ್ನು ಪ್ರಾರಂಭಿಸುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದು ಬಹಳ ಮುಖ್ಯ. ಆದರೆ ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ. ರಾತ್ರಿ ಮಲಗಿದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ಯಕೃತ್ತಿನಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕಬಹುದು. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ನೀರನ್ನು ಕುಡಿಯದೆ ದಿನವನ್ನು ಪ್ರಾರಂಭಿಸಿದರೆ ಅದು ಯಕೃತ್ತಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಬೆಳಗ್ಗೆ ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರ ಸೇವನೆ

ಅನೇಕರು ಬೆಳಗಿನ ಉಪಾಹಾರಕ್ಕೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುತ್ತಾರೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುವುದಲ್ಲದೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಯಕೃತ್ತಿನಲ್ಲಿ ಕೊಬ್ಬು ಸಂಗ್ರಹಕ್ಕೆ ಕಾರಣವಾಗುತ್ತವೆ. ಇದು ಫ್ಯಾಟಿ ಲಿವರ್‌ಗೆ ಕಾರಣವಾಗಬಹುದು. ಇದರಿಂದ ಯಕೃತ್ತಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ.

ವ್ಯಾಯಾಮ ಮಾಡದಿರುವುದು

ಬೆಳಗ್ಗೆ ಸ್ವಲ್ಪ ವ್ಯಾಯಾಮ ಮಾಡುವುದು ದೇಹಕ್ಕೆ ಮಾತ್ರವಲ್ಲ ಯಕೃತ್ತಿಗೂ ಪ್ರಯೋಜನಕಾರಿ. ವ್ಯಾಯಾಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಯಕೃತ್ತಿನ ಕಾರ್ಯವನ್ನೂ ಸುಧಾರಿಸುತ್ತದೆ. ದಿನವಿಡೀ ಕುಳಿತು ಕೆಲಸ ಮಾಡುವವರು ಬೆಳಗ್ಗೆ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡದೇ ಇದ್ದಲ್ಲಿ ಯಕೃತ್ತು ಕ್ರಮೇಣ ದುರ್ಬಲಗೊಳ್ಳಬಹುದು ಮತ್ತು ಭವಿಷ್ಯದಲ್ಲಿ ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ರಾತ್ರಿ ಉಳಿದ ಆಹಾರವನ್ನು ಬೆಳಗ್ಗೆ ಸೇವಿಸುವುದು

ರಾತ್ರಿ ಉಳಿದ ಆಹಾರವನ್ನು ಬೆಳಗ್ಗೆ ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಈ ಅಭ್ಯಾಸವು ಯಕೃತ್ತಿಗೆ ಹಾನಿ ಮಾಡುತ್ತದೆ. ಹಳೆಯ ಆಹಾರವು ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಏಕೆಂದರೆ ದೇಹದಿಂದ ಬ್ಯಾಕ್ಟೀರಿಯಾ ಮತ್ತು ವಿಷವನ್ನು ತೆಗೆದುಹಾಕಲು ಯಕೃತ್ತು ಹೆಚ್ಚು ಶ್ರಮಿಸಬೇಕಾಗುತ್ತದೆ.

ಬೆಳಗ್ಗೆ ಎದ್ದ ನಂತರ ಧೂಮಪಾನ ಅಥವಾ ಮದ್ಯ ಸೇವನೆ

ಬೆಳಗ್ಗೆ ಎದ್ದ ತಕ್ಷಣ ಸಿಗರೇಟ್ ಸೇದುವುದು ಅಥವಾ ಮದ್ಯಪಾನ ಮಾಡುವುದು ಲಿವರ್‌ಗೆ ಅಪಾಯಕಾರಿ. ಧೂಮಪಾನ ಮತ್ತು ಆಲ್ಕೋಹಾಲ್ ಯಕೃತ್ತಿನ ಕೋಶಗಳನ್ನು ಹಾನಿಗೊಳಿಸುತ್ತದೆ, ಇದು ಯಕೃತ್ತಿನ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಲಿವರ್ ಸಿರೋಸಿಸ್ ಅಥವಾ ಕ್ಯಾನ್ಸರ್ ಕೂಡ ಬರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read