ರುಚಿಕರ ‘ದಾಳಿಂಬೆ’ಯಲ್ಲಿವೆ ಈ ಔಷಧೀಯ ಗುಣಗಳು

ತಿನ್ನಲು ರುಚಿಕರವಾಗಿರುವ ದಾಳಿಂಬೆ ಹಣ್ಣು ಔಷಧೀಯ ಗುಣವನ್ನೂ ಹೊಂದಿದೆ. ಇದರಿಂದ ಉದರ ಸಂಬಂಧಿ, ಸೌಂದರ್ಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಲ್ಲಿರುವ ವಿಟಮಿನ್ ಸಿ, ಬಿ, ಇ ಮತ್ತು ಪಾಸ್ಫರಸ್ ಗುಣಗಳು ಮಹಿಳೆಯರಿಗೆ ಮತ್ತು ಮಕ್ಕಳಿಗೆ ತುಂಬ ಒಳ್ಳೆಯದು. ಕೆಲವು ಔಷಧೀಯ ಗುಣಗಳು ಹೀಗಿವೆ.

ದಾಳಿಂಬೆ ಹಣ್ಣಿನ ಮೇಲಿನ ತೊಗಟೆಯನ್ನು ಒಣಗಿಸಿ ಅದನ್ನು ಮಜ್ಜಿಗೆಯಲ್ಲಿ ತೇಯ್ದು ತಿಂದರೆ ಬೇಧಿ ನಿವಾರಣೆಯಾಗುತ್ತದೆ.

ದಾಳಿಂಬೆ ಚಿಗುರಿನ ತಂಬುಳಿ ಆರೋಗ್ಯಕ್ಕೆ ಒಳ್ಳೆಯದು.

ದಾಳಿಂಬೆ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚಿದರೆ ಉರಿ ಶಮನವಾಗುತ್ತದೆ.

ದಾಳಿಂಬೆಯ ತೊಗಟೆ ಬೇಯಿಸಿ ಕಷಾಯ ತಯಾರಿಸಿ ಅದಕ್ಕೆ ಅಡಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು, ಬಾಯಿ ಹುಣ್ಣು ಶಮನವಾಗುತ್ತದೆ.

ದಾಳಿಂಬೆಯ ರಸದಿಂದ ಪಿತ್ತ ಶಮನವಾಗುತ್ತದೆ ಮತ್ತು ಹೃದಯ, ಮೂತ್ರಪಿಂಡ ಕ್ರಿಯೆಗಳಿಗೆ ಶಕ್ತಿ ದೊರೆಯುತ್ತದೆ.

ದಾಳಿಂಬೆ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ತಲೆ ನೋವು, ಕಣ್ಣಿನ ದೋಷ ಮತ್ತು ಮಾನಸಿಕ ಒತ್ತಡದಿಂದ ದೂರವಿರಬಹುದು.

ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ದಾಳಿಂಬೆ ಕುಡಿಗಳನ್ನು ಅಗಿಯಬೇಕು.

ದಾಳಿಂಬೆ ಎಲೆಯ ರಸದೊಂದಿಗೆ ಸಕ್ಕರೆ ಬೆರೆಸಿ ತಿಂದರೆ ಬಿಕ್ಕಳಿಕೆ ನಿಲ್ಲುತ್ತದೆ.

ದಾಳಿಂಬೆ ಬೇರಿನ ಕಷಾಯ ಸೇವನೆಯಿಂದ ಜಂತುಹುಳು ನಿವಾರಣೆಯಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read