ಅನೇಕ ಲಾಭ ಪಡೆಯಲು ಈ ನಾಲ್ಕು ರಾಶಿಯವರು ಬಂಗಾರದ ಉಂಗುರು ಧರಿಸ್ಲೇಬೇಕು

ಬಂಗಾರ, ಬೆಳ್ಳಿ, ವಜ್ರವೆಂದ್ರೆ ಯಾರಿಗೆ ಆಸೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಬಂಗಾರದ ಆಭರಣ ಧರಿಸಲು ಇಷ್ಟಪಡ್ತಾರೆ. ಹಣವಿದೆ, ಬಂಗಾರ ಖರೀದಿಸುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಎಲ್ಲರೂ ವಜ್ರ, ಬಂಗಾರ ಧರಿಸುವುದು ಸೂಕ್ತವಲ್ಲ. ಜ್ಯೋತಿಷ್ಯದಲ್ಲಿ ಲೋಹದ ವಿಶೇಷತೆಯನ್ನು ವಿವರಿಸಲಾಗಿದೆ. ಎಲ್ಲರಿಗೂ ಎಲ್ಲ ಆಭರಣ ಹೊಂದಿಕೆ ಬರೋದಿಲ್ಲ. ಪ್ರತಿಯೊಂದು ಲೋಹವು ವ್ಯಕ್ತಿಯ ಜೀವನದಲ್ಲಿ ವಿಭಿನ್ನ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನ ಧರಿಸುವುದು ಒಳ್ಳೆಯದು. ಚಿನ್ನದ ಉಂಗುರ ಧರಿಸುವುದರಿಂದ ಅನೇಕ ಲಾಭವಿದೆ. ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಂತಾನ ಭಾಗ್ಯ ಹೀಗೆ ಅನೇಕ ಲಾಭವಿದೆ. ಆದ್ರೆ ಬಂಗಾರದ ಉಂಗುರವನ್ನು ಕೆಲ ರಾಶಿಯವರು ಮಾತ್ರ ಧರಿಸಬೇಕು.

ಸಿಂಹ ರಾಶಿ : ಈ ರಾಶಿಯವರಿಗೆ ಬಂಗಾರದ ಉಂಗುರು ಮಂಗಳಕರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿ, ಬೆಂಕಿಯ ಸಂಕೇತವಾಗಿದೆ. ಈ ರಾಶಿಯನ್ನು ಸೂರ್ಯ ಆಳ್ತಿದ್ದಾನೆ. ಹಾಗಾಗಿ ಸಿಂಹ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ. ಸಂತೋಷ, ಸಂಪತ್ತು ಸದಾ ಇರುತ್ತದೆ.

ಕನ್ಯಾ ರಾಶಿ : ಕನ್ಯಾ ರಾಶಿಯವರು ಸುಖ, ಸಂತೋಷ ಪ್ರಾಪ್ತಿಯಾಗ್ಬೇಕೆಂದ್ರೆ ಬಂಗಾರದ ಉಂಗುರ ಧರಿಸಬೇಕು. ಕನ್ಯಾ ರಾಶಿಯವರು ಚಿನ್ನದ ಉಂಗುರ, ಚೈನ್ ಅಥವಾ ಯಾವುದಾದ್ರೂ ಬಂಗಾರದ ಆಭರಣವನ್ನು ಧರಿಸಬಹುದು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

ತುಲಾ ರಾಶಿ :  ತುಲಾ ರಾಶಿಯವರಿಗೆ ಕೂಡ ಬಂಗಾರ ಶುಭವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಉಂಗುರ ತುಲಾ ರಾಶಿಯವರ ಅದೃಷ್ಟ ಬದಲಿಸುತ್ತದೆ. ಚಿನ್ನ ಶುಕ್ರನಿಗೆ ಲಾಭದಾಯಕವಾಗಿದೆ. ಶುಕ್ರ, ತುಲಾ ರಾಶಿಯ ಅಧಿಪತಿ. ಹಾಗಾಗಿ ಈ ರಾಶಿಯವರು ಚಿನ್ನದ ಉಂಗುರ ಧರಿಸುವುದು ಒಳ್ಳೆಯದು.

ಮೀನ ರಾಶಿ  : ಮೀನ ರಾಶಿಯವರು ಕೂಡ ಚಿನ್ನ ಧರಿಸುವುದು ಮಂಗಳಕರವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರಾಶಿಯವರಿಗೆ ಚಿನ್ನದ ಉಂಗುರ ಶುಭ ಫಲ ನೀಡುತ್ತದೆ. ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಿವಾರಿಸುವ ಕೆಲಸವನ್ನು ಬಂಗಾರದ ಉಂಗುರ ಮಾಡುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read