ಮದ್ಯಪಾನ ಮಾಡದವರಲ್ಲೂ ಫ್ಯಾಟಿ ಲಿವರ್‌ ಸಮಸ್ಯೆಗೆ ಕಾರಣವಾಗುತ್ತವೆ ಈ ಆಹಾರಗಳು.…!

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿಯೇ 90 ಪ್ರತಿಶತದಷ್ಟು ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಫ್ಯಾಟಿ ಲಿವರ್ (ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್) ಕೂಡ ಅಂತಹ ಗಂಭೀರ ಕಾಯಿಲೆಗಳಲ್ಲೊಂದು. ಯಕೃತ್ತಿನಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾದಾಗ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಆಲ್ಕೋಹಾಲ್‌ ಸೇವನೆ ಅಥವಾ ಮದ್ಯಪಾನ ಫ್ಯಾಟಿ ಲಿವರ್‌ಗೆ ಕಾರಣವೆಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಮದ್ಯಪಾನ ಮಾತ್ರ ಕಾರಣವಲ್ಲ. ಮದ್ಯವ್ಯಸನಿಗಳಲ್ಲದವರಲ್ಲಿಯೂ ಫ್ಯಾಟಿ ಲಿವರ್‌ ತೊಂದರೆ ಆಗಬಹುದು. ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು ಆಹಾರ.

ಸಕ್ಕರೆ ಮಿಶ್ರಿತ ಪಾನೀಯ

ಸೋಡಾ, ಎನರ್ಜಿ ಡ್ರಿಂಕ್ಸ್, ಪ್ಯಾಕೆಟ್‌ ಜ್ಯೂಸ್‌ಗಳು ಫ್ಯಾಟಿ ಲಿವರ್‌ಗೆ ಕಾರಣವಾಗುತ್ತವೆ. ಅವುಗಳಲ್ಲಿ ಬಹಳಷ್ಟು ಸಕ್ಕರೆ ಮತ್ತು ಫ್ರಕ್ಟೋಸ್ ಇರುತ್ತದೆ. ಪರಿಣಾಮ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇಂತಹ ಪಾನೀಯಗಳನ್ನು ಪ್ರತಿದಿನ ಸೇವಿಸುತ್ತಿದ್ದರೆ ಫ್ಯಾಟಿ ಲಿವರ್‌ ಸಮಸ್ಯೆ ಖಚಿತ.

ಫ್ರೆಂಚ್ ಫ್ರೈಸ್ ಮತ್ತು ಜಂಕ್ ಫುಡ್

ಫ್ರೆಂಚ್ ಫ್ರೈಸ್, ಬರ್ಗರ್ ಮತ್ತು ಚಿಪ್ಸ್‌ನಂತಹ ಕರಿದ ಆಹಾರಗಳು ಕೊಬ್ಬಿನಿಂದ ತುಂಬಿರುತ್ತವೆ. ಇವುಗಳು ಹೆಚ್ಚಿನ ಮಟ್ಟದ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುತ್ತವೆ. ಇದು ಯಕೃತ್ತಿನಲ್ಲಿ ಸಂಗ್ರಹಗೊಳ್ಳುತ್ತದೆ, ಪರಿಣಾಮ ಫ್ಯಾಟಿ ಲಿವರ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ವೈಟ್‌ ಬ್ರೆಡ್ ಮತ್ತು ಪಾಸ್ತಾ

ವೈಟ್‌ ಬ್ರೆಡ್‌, ಪಾಸ್ತಾ ಮತ್ತು ಇತರ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಫ್ಯಾಟಿ ಲಿವರ್‌ ಅಪಾಯವನ್ನು ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ಹೆಚ್ಚು ಸಕ್ಕರೆ ಮತ್ತು ಕಡಿಮೆ ಫೈಬರ್ ಅನ್ನು ಹೊಂದಿರುತ್ತವೆ. ಅವುಗಳ ಅತಿಯಾದ ಸೇವನೆಯಿಂದಾಗಿ ಯಕೃತ್ತಿನ ಕೊಬ್ಬು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.

ಡೈರಿ ಉತ್ಪನ್ನಗಳು

ಹಾಲು, ಚೀಸ್ ಮತ್ತು ಬೆಣ್ಣೆಯಂತಹ ಹೆಚ್ಚಿನ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳು ಕೂಡ ಫ್ಯಾಟಿ ಲಿವರ್‌ಗೆ ಕಾರಣವಾಗುತ್ತವೆ. ಇವುಗಳಲ್ಲಿ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬುಗಳಿರುತ್ತವೆ.

ಸಂಸ್ಕರಿಸಿದ ಮಾಂಸ

ಸಾಸೇಜ್, ಬೇಕನ್ ಮತ್ತು ಹಾಟ್ ಡಾಗ್‌ಗಳಂತಹ ಸಂಸ್ಕರಿಸಿದ ಮಾಂಸದಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಮತ್ತು ಉಪ್ಪು ಇರುತ್ತದೆ. ಈ ವಸ್ತುಗಳು ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತವೆ, ಇದು ಫ್ಯಾಟಿ ಲಿವರ್‌ ಅಪಾಯವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read