ಸಂಬಂಧದಲ್ಲಿ ಸಹೋದರಿಯನ್ನೇ ಮದುವೆಯಾಗಿದ್ದಾರೆ ಈ ಫೇಮಸ್‌ ಕ್ರಿಕೆಟರ್ಸ್‌..…!

ಕ್ರಿಕೆಟಿಗರ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಕುತೂಹಲ ಸಹಜ. ಅದರಲ್ಲೂ ಕ್ರಿಕೆಟಿಗರ ಪ್ರೇಮ ವಿವಾಹ, ವಿಚ್ಛೇದನಗಳ ಬಗ್ಗೆ ಸಾಕಷ್ಟು ಸುದ್ದಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಲೇ ಇರುತ್ತವೆ. ಅಚ್ಚರಿ ಅಂದ್ರೆ ನಾಲ್ವರು ಜನಪ್ರಿಯ ಕ್ರಿಕೆಟಿಗರು ತಮ್ಮ ಸ್ವಂತ ಸೋದರ ಸಂಬಂಧಿ ಸಹೋದರಿಯನ್ನು ಮದುವೆಯಾಗಿದ್ದಾರೆ.

ಶಾಹಿದ್ ಅಫ್ರಿದಿ ಮತ್ತು ನಾದಿಯಾ

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ 20ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದಾರೆ. ತಮ್ಮ ಕಸಿನ್‌ ಸಿಸ್ಟರ್‌ ಅನ್ನೇ ಅಫ್ರಿದಿ ವರಿಸಿದ್ದರು. ಸುಮಾರು 24 ವರ್ಷಗಳಿಂದ ನಾದಿಯಾ ಹಾಗೂ ಅಫ್ರಿದಿ ಜೊತೆಯಾಗಿಯೇ ಇದ್ದಾರೆ. 2000ನೇ ಇಸ್ವಿಯಲ್ಲಿ ಇವರ ವಿವಾಹ ನೆರವೇರಿದೆ. ಈ ದಂಪತಿಗೆ ಐವರು ಮಕ್ಕಳಿದ್ದಾರೆ.

ಮುಸ್ತಫಿಜುರ್ ರೆಹಮಾನ್ ಮತ್ತು ಸಮಿಯಾ ಪರ್ವೀನ್

ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಕೂಡ ತಮ್ಮ ಸೋದರ ಸಂಬಂಧಿ, ಸಹೋದರಿ ಸಮಿಯಾ ಪರ್ವೀನ್ ಶಿಮು ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆ ಮಾರ್ಚ್ 2019 ರಲ್ಲಿ ನಡೆದಿದೆ.

ಮೊಸದ್ದೆಕ್ ಹುಸೇನ್ ಮತ್ತು ಶರ್ಮಿನ್ ಸಮೀರಾ

ಕ್ರಿಕೆಟಿಗ ಮೊಸದ್ದೆಕ್ ಹುಸೇನ್ ಕೂಡ 2012ರಲ್ಲಿ ತಮ್ಮ ಸೋದರ ಸಂಬಂಧಿ ಶರ್ಮಿನ್ ಸಮೀರಾಳನ್ನು ವರಿಸಿದ್ದಾರೆ. ಮೊಸದ್ದೆಕ್ ಹುಸೇನ್ ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈತ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಇದೆ. ಇದರಿಂದಾಗಿಯೇ ತಂಡದಲ್ಲಿ ಅವರು ಸ್ಥಾನ ಕಳೆದುಕೊಂಡಿದ್ದರು.

ಸಯೀದ್ ಅನ್ವರ್ ಮತ್ತು ಲುಬ್ನಾ

1996 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಸಯೀದ್ ಅನ್ವರ್ ತನ್ನ ಸೋದರ ಸಂಬಂಧಿ ಸಹೋದರಿ ಲುಬ್ನಾಳನ್ನು ವಿವಾಹವಾದರು. ಲುಬ್ನಾ ವೃತ್ತಿಯಲ್ಲಿ ವೈದ್ಯೆ. ಕಾಕತಾಳೀಯವೆಂಬಂತೆ ಇದೇ ವರ್ಷ ಸಯೀದ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ 2001 ಪುತ್ರಿಯ ಅಕಾಲಿಗ ಮರಣ ಅವರಿಗೆ ಆಘಾತ ತಂದಿತ್ತು. ನಂತರ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ, 2003ರ ವಿಶ್ವಕಪ್ ನಂತರ ಅವರು ನಿವೃತ್ತರಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read