ಜಂತು ಹುಳು ನಿವಾರಣೆಗೆ ಹೀಗಿವೆ ಕೆಲವು ಮನೆ ಮದ್ದುಗಳು

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ ಹಾಗೂ ಮೂಗಿನಲ್ಲಿ ಯಾವಾಗಲೂ ತುರಿಕೆಯಾಗುವುದು ಇದರ ಲಕ್ಷಣಗಳು.

ಮನೆಮದ್ದಿನ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಜಂತು ಹುಳು ನಿವಾರಣೆಗೆ ಕೆಲವು ಮದ್ದುಗಳು ಹೀಗಿವೆ.

ಓಂಕಾಳನ್ನು ಕುಟ್ಟಿ ಪುಡಿ ಮಾಡಿ, ಸ್ವಲ್ಪ ಬೆಲ್ಲ ಸೇರಿಸಿ. ಬೆಳಿಗ್ಗೆ ಖಾಲಿಹೊಟ್ಟೆಗೆ ಕೊಟ್ಟ ಮೇಲೆ ಅರ್ಧ ಗಂಟೆ ಏನನ್ನು ತಿನ್ನಬಾರದು ಮತ್ತು ಕುಡಿಯಬಾರದು. ಈ ಮನೆ ಮದ್ದನ್ನು ನಿರಂತರವಾಗಿ 7 ದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕುದಿಸಿದ ನೀರಿಗೆ 10 ರಿಂದ 15 ಲವಂಗ ಹಾಕಿ. ಈ ನೀರನ್ನು 10 ನಿಮಿಷ ಮುಚ್ಚಿಡಿ. ನಂತರ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದನ್ನು 7 ದಿನಗಳವರೆಗೆ ಮಾಡುವುದರಿಂದ ಜಂತುಹುಳುಗಳು ಸಾಯುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read