ಈ ರಾಶಿಯಲ್ಲಿ ಹುಟ್ಟಿದವರು ಉತ್ತಮ ಪತಿಯಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ….!

ಮದುವೆ ಸಂಬಂಧವನ್ನ ಮಾಡುವ ವೇಳೆಯಲ್ಲಿ ವಧು – ವರರ ಜಾತಕ ಹೊಂದಾಣಿಕೆ ಮಾಡುವ ಪದ್ಧತಿ ಹಿಂದೂ ಶಾಸ್ತ್ರದಲ್ಲಿದೆ. ಮನುಷ್ಯನ ರಾಶಿ ಹಾಗೂ ನಕ್ಷತ್ರಗಳು ಆತನ ಗುಣಗಳ ಮೇಲೂ ಪ್ರಭಾವ ಬೀರುತ್ತೆ ಎಂಬ ಮಾತನ್ನ ತಳ್ಳಿ ಹಾಕುವಂತಿಲ್ಲ.

ಹುಟ್ಟಿದ ಮುಹೂರ್ತವನ್ನ ಆಧರಿಸಿ ಒಬ್ಬೊಬ್ಬರಿಗೆ ಒಂದು ರಾಶಿ ಎಂದು ನಿಗದಿ ಮಾಡಲಾಗುತ್ತದೆ. ಈ ರಾಶಿಯ ಪ್ರಕಾರ ನೀವು ಭವಿಷ್ಯದಲ್ಲಿ ಒಳ್ಳೆಯ ಪತಿ ಆಗುತ್ತಿರೊ ಇಲ್ಲವೋ ಅನ್ನೋದನ್ನ ತಿಳಿಯಬಹುದು. ಹಾಗಾದಲ್ಲಿ ಯಾವ ರಾಶಿಯಲ್ಲಿ ಹುಟ್ಟಿದ್ದಲ್ಲಿ ಉತ್ತಮ ಪತಿ ಎನಿಸಿಕೊಳ್ಳಬಹುದು ಎನ್ನೋದಕ್ಕೆ ಇಲ್ಲಿದೆ ಮಾಹಿತಿ.

ವೃಷಭ :

ಅತ್ಯಂತ ವಿಶ್ವಾಸಾರ್ಹ, ನಂಬಿಕಸ್ಥ, ಪ್ರಾಮಾಣಿಕ ಹಾಗೂ ರೊಮ್ಯಾಂಟಿಕ್​ ಆಗಿರುವ ಇವರು ತಮ್ಮ ಪತ್ನಿಯನ್ನ ಹೇಗೆ ಸಂತೋಷವಾಗಿ ಇಡಬೇಕು ಅನ್ನೋದನ್ನ ತುಂಬಾ ಚೆನ್ನಾಗಿ ಅರಿತಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ಪುರುಷರು ಸಂಬಂಧಗಳಲ್ಲಿ ಸ್ಥಿರತೆಯನ್ನ ಕಾಯ್ದುಕೊಳ್ತಾರೆ.

ಸಿಂಹ :

ಸಿಂಹ ರಾಶಿಯಲ್ಲಿ ಜನಿಸಿದ ಪುರುಷರು ತಮ್ಮ ಸಂಗಾತಿಗೆ ನಿಷ್ಟಾವಂತರಾಗಿ ಇರುತ್ತಾರೆ. ಇವರು ಪ್ರಜ್ಞಾವಂತರು ಕೂಡ..! ತನ್ನ ಸಂಗಾತಿಯನ್ನ ಹೊಗಳೋದು, ಕಾಳಜಿ ವಹಿಸೋದು ಹಾಗೂ ಪ್ರೀತಿಸೋದ್ರಲ್ಲಿ ಇವರು ನಿಸ್ಸೀಮರು. ಅಲ್ಲದೇ ಸಿಂಹ ರಾಶಿಯಲ್ಲಿ ಜನಿಸಿದವರು ತಮ್ಮ ಪತ್ನಿಗೆ ಹೆಚ್ಚಾಗಿ ಉಡುಗೊರೆಗಳನ್ನ ತಂದುಕೊಡ್ತಾರೆ. ಹಾಗೂ ಇವರು ಪತ್ನಿಯೊಂದಿಗೆ ಪ್ರವಾಸಕ್ಕೆ ತೆರಳೋದನ್ನ ತುಂಬಾನೇ ಇಷ್ಟ ಪಡ್ತಾರೆ.

ಕಟಕ:

ಕಟಕ ರಾಶಿಯಲ್ಲಿ ಜನಸಿದವರ ಜೊತೆ ಸಮಯ ಕಳೆಯೋದು ಎಲ್ಲರಿಗೂ ಇಷ್ಟವಾಗುತ್ತದೆ. ಇವರು ಎಲ್ಲರಿಂದಲೂ ಪ್ರೀತಿಸಲ್ಪಡುತ್ತಾರೆ. ಅಲ್ಲದೇ ಇವರು ತುಂಬಾ ಭಾವನಾತ್ಮಕ ಜೀವಿ. ತಮ್ಮ ಸಂಗಾತಿಯನ್ನ ಅತ್ಯಂತ ವಾತ್ಸಲ್ಯದಿಂದ ಹಾಗೂ ಪ್ರೀತಿಯಿಂದ ನೋಡಿಕೊಳ್ತಾರೆ. ಅಲ್ಲದೇ ಪತ್ನಿಯ ಜೊತೆ ಗುಣಮಟ್ಟದ ಸಮಯವನ್ನ ಕಳೆಯಲು ಇಚ್ಚಿಸುತ್ತಾರೆ. ತುಂಬಾ ದಯನೀಯ ಗುಣದವರಾದ ಇವರು ತಮ್ಮ ಸಂಗಾತಿಯನ್ನ ಖುಷಿಯಲ್ಲಿಡಲು ಏನು ಬೇಕಿದ್ದರೂ ಮಾಡುತ್ತಾರೆ.

ಮೀನ :

ಮೀನ ರಾಶಿಯಲ್ಲಿ ಜನಿಸಿದವರು ತಮ್ಮ ಸುತ್ತಮುತ್ತಲು ಇರುವವರನ್ನ ಖುಷಿಯಾಗಿ ಇಡಲು ಇಚ್ಛಿಸುತ್ತಾರೆ. ತಮ್ಮ ಪತ್ನಿಯನ್ನ ಪ್ರೀತಿಸುವ ಯಾವುದೇ ಅವಕಾಶವನ್ನ ಇವರು ಮಿಸ್​ ಮಾಡಿಕೊಳ್ಳೋದೇ ಇಲ್ಲ. ಎಲ್ಲಾ ಸಂದರ್ಭಗಳಲ್ಲೂ ಇವರು ಸಂಗಾತಿಗೆ ಬೆಂಗಾವಲಾಗಿ ನಿಲ್ಲತ್ತಾರೆ. ಇವರು ಸುಳ್ಳು ಹೇಳೋದು ತುಂಬಾನೇ ವಿರಳ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read