ʼಅರಿಶಿನʼದ ಹಾಲನ್ನ ಸೇವಿಸುವುದರಿಂದ ಇದೆ ಕೆಲವೊಂದು ಅನಾನುಕೂಲ

ಅರಿಶಿನದ ಹಾಲನ್ನು ಔಷಧಿ ರೂಪದಲ್ಲಿ ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಆದ್ರೆ ಸಾಕಷ್ಟು ಔಷಧಿ ಗುಣವಿರುವ ಅರಿಶಿನದ ಹಾಲು ಎಲ್ಲರಿಗೂ ಒಳ್ಳೆಯದಲ್ಲ. ಕೆಲವೊಂದು ಅನಾನುಕೂಲಗಳೂ ಇದರಲ್ಲಿವೆ.

ಲಿವರ್ ಸಮಸ್ಯೆ : ಯಕೃತ್ತು ದೊಡ್ಡದಾಗಿರುವ ಹಾಗೂ ಯಕೃತ್ತು ಸಮಸ್ಯೆಯಿಂದ ಬಳಲುತ್ತಿರುವ ಜನರು ಅರಿಶಿನ ಹಾಲನ್ನು ಸೇವಿಸಬಾರದು.

ಅಲರ್ಜಿ ಸಮಸ್ಯೆ : ಕೆಲವರಿಗೆ ಮಸಾಲೆ ಪದಾರ್ಥ ಅಲರ್ಜಿಯನ್ನುಂಟು ಮಾಡುತ್ತದೆ. ಅಲರ್ಜಿ ಸಮಸ್ಯೆಯಿಂದ ಬಳಲುವವರು ಅರಿಶಿನದಿಂದ ದೂರ ಇರುವುದು ಒಳ್ಳೆಯದು.

ಗರ್ಭಿಣಿ : ಗರ್ಭಿಣಿಯಾದವಳು ಅರಿಶಿನದ ಹಾಲನ್ನು ಸೇವಿಸಬಾರದು. ಗರ್ಭಾಶಯ ಕುಗ್ಗುವಿಕೆ, ಗರ್ಭಕೋಶದ ಸಮಸ್ಯೆ ಎದುರಾಗುತ್ತದೆ.

ರಕ್ತ ಹೀನತೆಯುಳ್ಳವರು : ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನ ಸೇವನೆ ನಿಲ್ಲಿಸುವುದು ಒಳ್ಳೆಯದು.

ಶಸ್ತ್ರಚಿಕಿತ್ಸೆ : ಶಸ್ತ್ರಚಿಕಿತ್ಸೆ ನಂತ್ರವೂ ಅರಿಶಿನ ಬಳಸಬಾರದು. ಶಸ್ತ್ರಚಿಕಿತ್ಸೆಯಾದವರು ಅರಿಶಿನ ಸೇವನೆ ಮಾಡಿದ್ರೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read