ಪ್ರತಿದಿನ ‘ವಾಕಿಂಗ್’ ಮಾಡುವುದರಿಂದ ಇದೆ ಇಷ್ಟೆಲ್ಲಾ ಲಾಭ…..!

ಆಧುನಿಕ ಜೀವನಶೈಲಿ, ಕುಳಿತು ಮಾಡುವ ಕೆಲಸಗಳು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ. ಇತ್ತೀಚೆಗಂತೂ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ಕಾಡುವುದರಿಂದ ಜನ ಕಂಡಕಂಡದ್ದನ್ನೆಲ್ಲಾ ಮಾಡುವುದನ್ನು ನೋಡಿರುತ್ತೀರಿ.

ಇದರ ಬದಲಿಗೆ ವಾಕ್ ಮಾಡಿ. ಕೇವಲ 25 ನಿಮಿಷದ ನಡಿಗೆ ನಿಮ್ಮ ಆಯಸ್ಸನ್ನು ವೃದ್ಧಿಸುತ್ತದೆ. ಹೌದು, ಕೇವಲ 25 ನಿಮಿಷ ಬ್ರಿಸ್ಕ್ ವಾಕ್ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಇದರಿಂದ ನಿಮ್ಮ ಆಯಸ್ಸು 3 ರಿಂದ 7 ವರ್ಷದವರೆಗೆ ವೃದ್ಧಿಸುತ್ತದೆ ಎಂಬುದು ಅಧ್ಯಯನದ ಸಂದರ್ಭದಲ್ಲಿ ತಿಳಿದುಬಂದಿದೆ.

ಸುಮಾರು 30 ರಿಂದ 60 ವರ್ಷ ವಯಸ್ಸಿನ ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಂಡುಬಂದ ಮಾಹಿತಿಯಂತೆ, ದಿನಕ್ಕೆ ಕೇವಲ 25 ನಿಮಿಷ ಬ್ರಿಸ್ಕ್ ವಾಕ್ ಮಾಡುವುದರಿಂದ, ಆಯಸ್ಸು ಹೆಚ್ಚುತ್ತದೆ. ಅಧ್ಯಯನಕ್ಕೆ ಒಳಪಡಿಸಿದದವರನ್ನು ಡಿ.ಎನ್.ಎ. ಪರೀಕ್ಷೆಗೆ ಒಳಪಡಿಸಿದಾಗ, ಆಯಸ್ಸು ಹೆಚ್ಚಿಸುವ ಲಕ್ಷಣ ಕಂಡುಬಂದಿವೆ.

ಅಲ್ಲದೇ, ಯಾವುದೇ ವ್ಯಾಯಾಮ ಮಾಡದವರೂ ಕೂಡ, ಹೀಗೆ ದಿನಾಲು ಬ್ರಿಸ್ಕ್ ವಾಕ್ ಮಾಡುವುದರಿಂದ ಆಯಸ್ಸು ಹೆಚ್ಚಿಸಿಕೊಳ್ಳಬಹುದಾಗಿದೆ. ವಾಕ್ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತಂತೆ, ನಡೆಸಿದ ವೈಜ್ಞಾನಿಕ ಸಂಶೋಧನೆ ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read