 ಪೊಲೀಸ್ ಠಾಣೆಯ ಒಳಗಿದ್ದ ಮದ್ಯದ ಬಾಟಲಿಗಳನ್ನೇ ಕಳ್ಳರು ಎಗರಿಸಿದಂತಹ ಘಟನೆಯೊಂದು ಮುಝಾಪುರದಲ್ಲಿ ಸಂಭವಿಸಿದ್ದು ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ.
ಪೊಲೀಸ್ ಠಾಣೆಯ ಒಳಗಿದ್ದ ಮದ್ಯದ ಬಾಟಲಿಗಳನ್ನೇ ಕಳ್ಳರು ಎಗರಿಸಿದಂತಹ ಘಟನೆಯೊಂದು ಮುಝಾಪುರದಲ್ಲಿ ಸಂಭವಿಸಿದ್ದು ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ.
ಸಿಖಂದರ್ಪುರ ಪೊಲೀಸ್ ಠಾಣೆಯಲ್ಲಿ ಸೀಝ್ ಮಾಡಿ ಇರಿಸಲಾಗಿದ್ದ ಮದ್ಯದ ಬಾಟಲಿಗಳನ್ನು ಶುಕ್ರವಾರ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧಕ್ಕೆ ಒಳಗಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಮದ್ಯಗಳು ಸಿಗುತ್ತವೆಯೋ ಅವುಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ಭಾರೀ ಮಳೆ ಇದ್ದರಿಂದ ಪೊಲೀಸರನ್ನು ಬೇರೆ ಬೇರೆ ಕಡೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದ ಖದೀಮರು ಮದ್ಯವನ್ನ ಕದ್ದು ಎಸ್ಕೇಪ್ ಆಗಿದ್ದಾರೆ.
ಐದು ಬಾಕ್ಸ್ ಮದ್ಯದ ಬಾಟಲಿಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಠಾಣೆಯಲ್ಲಿದ್ದ ಪೊಲೀಸರಿಗೂ ಮಾರನೆಯ ದಿನದವರೆಗೂ ಠಾಣೆಯಲ್ಲಿ ಸೀಜ್ ಮಾಡಿದ್ದ ಮದ್ಯದ ಬಾಟಲಿಗಳು ಕಳುವಾಗಿದೆ ಎಂಬುದರ ಬಗ್ಗೆ ಸಣ್ಣ ಕುರುಹೂ ಇರಲಿಲ್ಲ ಎನ್ನಲಾಗಿದೆ.
https://twitter.com/i/status/1705845293005337014

 
		 
		 
		 
		 Loading ...
 Loading ... 
		 
		 
		