ಬೆಂಗಳೂರು: ಹಿಂದೂ ಅರ್ಚಕರು, ಸ್ವಾಮೀಜಿಗಳ ವೇಷ ಧರಿಸಿ ಮುಸ್ಲಿಂ ವ್ಯಕ್ತಿಯೊರ್ವ ದೋಷ ಪರಿಹಾರಕ್ಕಾಗಿ ಪೂಜೆ ಮಾಡುವುದಾಗಿ ಹೇಳಿ ಕಳ್ಳತನ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹುಳಿಮಾವು ಭಾಗದಲ್ಲಿ ಮನೆಗಳಿಗೆ ತೆರಳಿ ನಿಮ್ಮ ಮನೆಗೆ, ಕುಟುಂಬಕ್ಕೆ ಮಾಟ-ಮಂತ್ರ ಮಾಡಿಸಲಾಗಿದೆ. ದೋಷ ಪರಿಹಾರ ಮಾಡಿಕೊಡಲು ಮನೆಯಲ್ಲಿ ಪೂಜೆ ಮಾಡುತ್ತೇನೆ ಎಂದು ಸ್ವಾಮೀಜಿ, ಅರ್ಚಕರಂತೆ ವಿವಿಧ ರೀತಿಯಲ್ಲಿ ವೇಷ ಧರಿಸಿಕೊಂಡು ನಾಟಕವಾಡುತ್ತಿದ್ದ ಖತರ್ನಾಕ್ ಕಳ್ಳ ಬಳಿಕ ಪೂಜೆ ನೆಪದಲ್ಲಿ ಮನೆಯವರನ್ನು ಹೊರಗೆ ಕಳುಹಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ.
ಇದೀಗ ಹುಳಿಮಾವು ಠಾಣೆ ಪೊಲೀಸರು ಆರೋಪಿ ದಾದಾಫಿರ್ ನನ್ನು ಬಂಧಿಸಿದ್ದಾರೆ. ಮನೆಗಳಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಮನೆಯವರನ್ನೆಲ್ಲ ಹೊರಗೆ ಕಳುಹಿಸಿ ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ತೆಗೆದುಕೊಂಡು, ಮಡಿಕೆಗೆ ಕಲ್ಲುಗಳನ್ನು ತುಂಬಿ ಅದರಲ್ಲಿ ಚಿನ್ನವಿಟ್ಟು ಹೂತುಹಾಕಿದ್ದಾಗಿ ಹೇಳಿ ನಂಬಿಸುತ್ತಿದ್ದ. ಬಳಿಕ 45 ದಿನಗಳ ನಂತರ ಅದನ್ನು ತೆಗೆಯಿರಿ ಎಂದು ಹೇಳಿ ಎಸ್ಕೇಪ್ ಆಗುತ್ತಿದ್ದ.
ಹಳಿಮಾವು ಠಾಣೆಯಲ್ಲಿ ಖದೀಮನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ದಾದಾಫಿರ್ ನನ್ನು ಬಂಧಿಸಿರುವ ಪೊಲೀಸರು 53 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.