ಮಡಿಕೇರಿ: ಕೊಡಗು ಜಿಲ್ಲೆ ಸುಂಟಿಕೊಪ್ಪದ ಜ್ಯುವೆಲರಿ ಶಾಪ್ ವೊಂದರಲ್ಲಿ ಇತ್ತೀಚೆಗ ನಡೆದಿದ್ದ ಚಿನ್ನದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಲ್ಪನಾ(37), ಬಬಿತಾ(47), ಪೂಜಾ(29) ಬಂಧಿತ ಆರೋಪಿಗಳು. ಇವರಿಂದ 22.180 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ.
ಸೆ. 14ರಂದು ಅಪರಿಚಿತ ಮೂವರು ಮಹಿಳೆಯರು ಚಿನ್ನಾಭರಣ ಖರೀದಿ ನೆಪದಲ್ಲಿ ಸುಂಟಿಕೊಪ್ಪದ ಫ್ಯಾಷನ್ ಜ್ಯುವೆಲ್ಲರಿಗೆ ಬಂದಿದ್ದು, ಯಾರ ಗಮನಕ್ಕೂ ಬಾರದಂತೆ ಎರಡು ಚಿನ್ನದ ಸರಗಳನ್ನು ಕಳವು ಮಾಡಿದ್ದರು. ಅಂಗಡಿ ಮಾಲೀಕರು ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು.
ಎಸ್ಪಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್ಪಿ ಚಂದ್ರಶೇಖರ್, ಕುಶಾಲನಗರ ಸಿಪಿಐ ದಿನೇಶ್ ಕುಮಾರ್, ಪಿಎಸ್ಐ ಮೋಹನ್ ರಾಜು, ಸುಂಟಿಕೊಪ್ಪ ಠಾಣೆಯ ಪಿಎಸ್ಐ ಭಾರತಿ ಕೆ.ಹೆಚ್. ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.