ಕೆಲಸಕ್ಕೆ ಸೇರಿದ 3 ತಿಂಗಳಲ್ಲೇ ಮಾಲೀಕನ ಮಗಳ ಮೇಲೆ ರೇಪ್; ಪುಸಲಾಯಿಸಿ ಅಪ್ರಾಪ್ತೆ ಜೊತೆ ‘ಎಸ್ಕೇಪ್’

ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲಿ ಮಾಲೀಕರ ಮಗಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ವರದಿಯಾಗಿದೆ.

ಕುಟುಂಬವೊಂದರ ಚಾಲಕ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು ಆಕೆಯ ಕುಟುಂಬದ ನಂಬಿಕೆಯನ್ನೇ ಮುರಿದಿದ್ದಾನೆ.

ಆರೋಪಿ ವಿಕ್ಕಿ ಕುಮಾರ್ ನನ್ನು ಅತ್ಯಾಚಾರ ಮತ್ತು ಅಪಹರಣದ ಆರೋಪದ ಮೇಲೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮೇ 2024 ರಲ್ಲಿ ಇಸ್ಮಾಯಿಲ್‌ಪುರ ಗ್ರಾಮದ ನಿವಾಸಿ ಸಂತ್ರಸ್ತೆಯ ತಂದೆಗೆ ಚಾಲಕನಾಗಿ ಕೆಲಸ ಮಾಡಲು ಸೇರಿಕೊಂಡ. ಈ ಸಮಯದಲ್ಲಿ ಆತ ಅಪ್ರಾಪ್ತ ಬಾಲಕಿಯ ಜೊತೆ ಸ್ನೇಹ ಬೆಳೆಸಿದ್ದ. ಕ್ರಮೇಣ ಈ ಸ್ನೇಹ ಅನ್ಯೋನ್ಯತೆಗೆ ತಿರುಗಿ ಆತ ಹುಡುಗಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಬಾಲಕಿಯ ಮುಗ್ಧತೆಯ ಲಾಭ ಪಡೆದ ವಿಕ್ಕಿಕುಮಾರ್ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ.

ಆರೋಪಿಯ ಧೈರ್ಯವು ಎಷ್ಟು ಹೆಚ್ಚಾಯಿತು ಎಂದರೆ 8 ಆಗಸ್ಟ್ 2024 ರಂದು ಅವನು ಹುಡುಗಿಯೊಂದಿಗೆ ಮನೆ ಬಿಟ್ಟುಹೋದನು. ಆಮಿಷ ಒಡ್ಡಿ ಆಕೆಯನ್ನು ಫರಿದಾಬಾದ್‌ನಿಂದ ಉದಯಪುರಕ್ಕೆ ಕರೆದುಕೊಂಡು ಹೋದನು. ಚಾಲಕ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆಂದು ನಂಬಲು ಸಾಧ್ಯವಾಗದೇ ಆಘಾತಕ್ಕೊಳಗಾದ ಕುಟುಂಬ ಬಾಲಕಿ ನಾಪತ್ತೆಯಾದ ಬಳಿಕ ತಕ್ಷಣ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಅಪಹರಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡರು.

ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಉದಯಪುರದಲ್ಲಿ ದಾಳಿ ನಡೆಸಿ ಆರೋಪಿ ವಿಕ್ಕಿ ಕುಮಾರ್ ನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಕೂಡ ರಕ್ಷಿಸಲಾಗಿದೆ. ಈ ಘಟನೆಯು ಸಮಾಜದಲ್ಲಿ ವಿಶ್ವಾಸಾರ್ಹ ಸಂಬಂಧಗಳನ್ನು ನಿರ್ಮಿಸುವುದು ಕಷ್ಟಕರವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read