BIG NEWS: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೆನಿಜುವೆಲಾದ ಜುವನ್ ವಿಸೆಂಟೆ ಪೆರೇಝ್ ಮೊರ ವಿಧಿವಶರಾಗಿದ್ದಾರೆ.

114 ವರ್ಷದ ಅವರು ಮೃತಪಟ್ಟಿರುವ ವಿಚಾರವನ್ನು ಬಂಧುಗಳು ಖಚಿತಪಡಿಸಿದ್ದು, 2022 ರ ಫೆಬ್ರವರಿಯಂದು ಜುವನ್ ವಿಸೆಂಟೆ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ದಾಖಲಾಗಿದ್ದರು.

ಆ ಸಂದರ್ಭದಲ್ಲಿ ಜುವನ್ 112 ವರ್ಷ 253 ದಿನ ವಯಸ್ಸಿನವರಾಗಿದ್ದರು. ಅದಾದ ಬಳಿಕವೂ ಒಂದೂವರೆ ವರ್ಷಗಳ ಕಾಲ ಕುಟುಂಬಸ್ಥರೊಂದಿಗೆ ಜುವನ್ ಜೀವನ ನಡೆಸಿದ್ದರು.

11 ಮಕ್ಕಳು, 41 ಮೊಮ್ಮಕ್ಕಳು, 18 ಮರಿ ಮೊಮ್ಮಕ್ಕಳನ್ನು ಹೊಂದಿದ್ದ ಜುವನ್ 1909ರ ಮೇ 27ರಂದು ಆಂಡಿಯಾನ್ ರಾಜ್ಯದ ಎಲ್ ಕೊಬ್ರೆ ನಗರದಲ್ಲಿ ಜನಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read